Home Blog Page 50

BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…

 

ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಅದರಲ್ಲೂ ಪ್ರಸ್ತುತವಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ (Karnataka Government Gyaranty Scheme) ಚುನಾವಣೆ ಪೂರ್ವವಾಗಿ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು (Gruhalakshmi and Annabhagya) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯ ಖಾತೆಗೆ (HOF Women) 2,000 ಸಹಾಯಧನ ಹಾಗೂ ಅನ್ನಭಾಗ್ಯ ಯೋಜನೆಯು ಮೂಲಕ BPL & AAY ಕಾರ್ಡ್ ದಾರರ ಪ್ರತಿ ಸದಸ್ಯನ ಹೆಚ್ಚುವರಿ ಅಕ್ಕಿಯ 5Kg ಅಕ್ಕಿ ಹಣ ರೂ.170 ಕೂಡ ಕುಟುಂಬದ ಮುಖ್ಯಸ್ಥೆ ಖಾತೆಗೆ ವರ್ಗಾವಣೆ ಆಗುತ್ತಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 90% ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಅನುದಾನ ದೊರೆಯುತ್ತಿದೆ. ಈ ಯೋಜನೆಯ ಹಣವು DBT ಮೂಲಕ ಫಲಾನುಭವಿಯ ಖಾತೆಗಳಿಗೆ ವರ್ಗಾವಣೆ ಆಗುತ್ತಿರುವುದರಿಂದ ಕೆಲವು ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಲು ಸಮಸ್ಯೆಯಾಗುತ್ತಿದೆ.

ಹಣ ಪಡೆಯಲಾಗದ ಮಹಿಳೆಯರಿಗೆ ಈ ಬಗ್ಗೆ ಇರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಶಿಬಿರಗಳನ್ನು ನಡೆಸಿ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದೆ ಇರುವುದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗದೆ ಇರುವುದು, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿ ಮಹಿಳಾ ಹಿರಿಯ ಸದಸ್ಯರ ಹೆಸರೇ ಇರುವುದೇ ಇರುವುದು, ಕೊಟ್ಟಿರುವ ದಾಖಲೆಗಳಲ್ಲಿ ಮಾಹಿತಿ ಒಂದೇ ರೀತಿ ಇಲ್ಲದೆ ಇರುವುದು, ಕೆಲ ತಾಂತ್ರಿಕ ಸಮಸ್ಯೆಗಳು ಇತ್ಯಾದಿ ಕಾರಣದಿಂದ ಹಣ ಬರಲು ಸಮಸ್ಯೆಯಾಗಿದೆ.

ಈ ಸಮಸ್ಯೆಗಳಿಂದ ಹಣ ಪಡೆಯಲು ಆಗದೆ ಇದ್ದವರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕೊಟ್ಟು ಮತ್ತು ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿ ನಂತರ ಎಲ್ಲಾ ಕಂತುಗಳ ಹಣವನ್ನು ಕೂಡ ಒಟ್ಟಿಗೆ ವರ್ಗಾವಣೆ ಮಾಡಲಾಗಿತ್ತು. ಸರ್ಕಾರದ ಗ್ಯಾರೆಂಟಿ ಯೋಜನೆಗಳ ಸಮಸ್ಯೆ ಪರಿಹಾರ ಶಿಬಿರಗಳಲ್ಲಿ ಪಾಲ್ಗೊಂಡ ಅನೇಕರ ಸಮಸ್ಯೆ ಪರಿಹಾರವಾಗಿದೆ.

ಆದರೂ ಇಂದು ಸರ್ಕಾರದ ಕಡೆಯಿಂದ ಮತ್ತೊಂದು ಅಪ್ಡೇಟ್ ರೇಷನ್ ಕಾರ್ಡ್ ಕುರಿತು ಹೊರ ಬಿದ್ದಿದೆ. ಇದನ್ನು ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವ ನಾಗರಿಕನು ಕೂಡ ತಿಳಿದುಕೊಂಡಿರಬೇಕು. ಸರ್ಕಾರದ ಈ ನಿಯಮದ ಪ್ರಕಾರವಾಗಿ ನಿಮ್ಮ ರೇಷನ್ ಕಾರ್ಡ್ ಇಲ್ಲದೆ ಇದ್ದಲ್ಲಿ ಮುಂದಿನ ತಿಂಗಳದಿಂದ ಗೃಹಲಕ್ಷ್ಮಿ ಹಣವಾಗಲಿ ಅನ್ನ ಭಾಗ್ಯ ಹಣವಾಗಲಿ ಸಿಗುವುದಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಳೆದ ಆರು ತಿಂಗಳಿಂದ ಯಾರು ಪಡಿತರವನ್ನು ಪಡೆದಿಲ್ಲ ಅಂತಹವರ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲು ನಿರ್ಧರಿಸಿದೆ. ಈ ರೀತಿ ರೇಷನ್ ಕಾರ್ಡ್ ರದ್ದಾದರೆ ರೇಷನ್ ಕಾರ್ಡ್ ಆಧಾರಿತವಾದ ಯಾವ ಸೌಲಭ್ಯವು ಸಿಗುವುದಿಲ್ಲ.

ಹಾಗಾಗಿ ಕೂಡಲೇ ನಿಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಬಯೋಮೆಟ್ರಿಕ್ ಕೊಟ್ಟು ರೇಷನ್ ಪಡೆಯಿರಿ ಮತ್ತು ಅದೇ ರೀತಿ ಸರ್ಕಾರ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯರು ಇ-ಕೆವೈಸಿ ಅಪ್ಡೇಟ್ ಕಡ್ಡಾಯಗೊಳಿಸಿದೆ. ಇದನ್ನು ಪೂರೈಸದ ಸದಸ್ಯನ ಹೆಚ್ಚುವರಿ ಅಕ್ಕಿ ಹಣ ಬರುವುದಿಲ್ಲ ಆದ್ದರಿಂದ ಕೂಡಲೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.

 

ಶಿವರಾತ್ರಿ ದಿನ ಈ ತಪ್ಪುಗಳನ್ನು ಮಾಡಬೇಡಿ ಶಿವ ಕೋಪಗೊಳ್ಳುವನು

.

ಭಾರತದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ, ಅದರಲ್ಲೂ ಶಿವಭಕ್ತರಿಗೆ ಇದು ಬಹಳ ದೊಡ್ಡ ಹಬ್ಬ. ಸಾಮಾನ್ಯವಾಗಿ ಹಬ್ಬದ ಆಚರಣೆ ಭಾರತದದ್ಯಾಂತ ಒಂದೇ ರೀತಿ ಇರುತ್ತದೆ. ಈ ಹಬ್ಬದಂದು ಉಪವಾಸ ಇದ್ದು ಶಿವಪೂಜೆ ಮಾಡಿ ಶಿವನ ಧ್ಯಾನದಲ್ಲಿ ರಾತ್ರಿ ಪೂರ್ತಿ ಜಾಗರಣೆ ಇರುತ್ತಾರೆ ಈ ದಿನ ಶಿವನಿಗಾಗಿ ಮೀಸಲು ಮತ್ತು ಶಿವನೆಂದರೆ ಬಹಳ ಸರಳ.

ಶುದ್ಧವಾದ ಜಲದಿಂದ ಅಭಿಷೇಕ ಮಾಡಿ ನಿಮ್ಮ ಮನೆಯಲ್ಲಿ ಸಿಗುವ ತುಂಬೆ ಪತ್ರೆ, ಬಿಲ್ವ ಪತ್ರೆ ಅರ್ಪಿಸಿ ಭಕ್ತಿಯಿಂದ ಪಂಚಾಕ್ಷರಿ ಮಂತ್ರ ಪಠಿಸಿದರೆ ಸಾಕು ಆತನ ಅನುಗ್ರಹ ಸಿಗುತ್ತದೆ. ಆದರೆ ಈ ದಿನದಂದು ನೀವು ಕೆಲವು ತಪ್ಪುಗಳನ್ನು ಮಾತ್ರ ಮಾಡಬಾರದು, ಇದರಿಂದ ಮಹಾದೇವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾದರೆ ಶಿವರಾತ್ರಿ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು ಏನು ಎಂದು ಪ್ರತಿಯೊಬ್ಬರೂ ತಿಳಿದುಕೊಂಡು ಪಾಲಿಸಿ ಶಿವನ ಕೃಪೆಗೆ ಪಾತ್ರರಾಗಿ.

ಮಹಾಶಿವರಾತ್ರಿ ದಿನ ಈ ರೀತಿ ಆಚರಣೆ ಮಾಡಿ
* ಮಹಾಶಿವರಾತ್ರಿ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಾಡಿಟ್ಟುಕೊಂಡು ದೇವರಿಗೆ ಪೂಜೆ ಮಾಡಬೇಕು
* ಈ ದಿನ ಶುಭನಿಗಾಗಿ ಮೀಸಲು ಆದರೆ ಪೂಜೆ ಮಾಡುವ ಮೊದಲು ಪ್ರಥಮ ಪೂಜೆ ವಂದಿತನಾದ ಗಣೇಶನನ್ನು ಮೊದಲು ಪೂಜಿಸಿ ನಂತರ ಶಿವನ ಪೂಜೆ ಮಾಡಬೇಕು. ಇದು ಈಶ್ವರನ ಆಜ್ಞೆ ಕೂಡ
* ಶಿವರಾತ್ರಿ ದಿನ ಕೆಲವರು ದಿನಪೂರ್ತಿ ನೀರು ಕೂಡ ಕುಡಿಯದೆ ಉಪವಾಸ ಇರುತ್ತಾರೆ.

ಈ ಸುದ್ದಿ ನೋಡಿ:-ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

ಆದರೆ ಈ ರೀತಿ ಇರಲು ಆಗದೆ ಇದ್ದವರು ಹಾಲು ಹಾಲಿನ ಉತ್ಪನ್ನಗಳು ಪಾಯಸ ಜೋಳ ಹಣ್ಣುಗಳು ಇವುಗಳನ್ನು ಸೇವಿಸಬಹುದು ಆದರೆ ಸೂರ್ಯಸ್ತದ ನಂತರ ಜಾಗರಣೆ ಸಮಯದಲ್ಲಿ ಮಾತ್ರ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಬಾರದು.
* ಮನೆಯಲ್ಲಿ ಶಿವಲಿಂಗ ಇದ್ದರೆ ಶಿವಲಿಂಗಕ್ಕೆ ಅಭಿಷೇಕಗಳನ್ನು ಮಾಡಿ ಪೂಜೆ ಮಾಡಬಹುದು ಒಂದು ವೇಳೆ ಇಲ್ಲದೆ ಇದ್ದರೆ ಶಿವನ ದೇವಾಲಯಗಳಿಗೆ ಅಭಿಷೇಕ ಮಾಡುವ ವಸ್ತುಗಳನ್ನು ಮತ್ತು ಅಲಂಕಾರ ಮಾಡಲು ಪುಷ್ಪಗಳನ್ನು ಪೂಜಾ ಸಾಮಗ್ರಿಗಳನ್ನು ಅರ್ಪಿಸಬಹುದು.

* ಮನೆಯಲ್ಲಿ ಶಿವಪೂಜೆ ಮಾಡುವವರು ಶಿವನಿಗೆ ಅಭಿಷೇಕ ಮಾಡಿ ಗಂಧ, ಚಂದನ, ಭಸ್ಮ ಲೇಪನ ಮಾಡಿ ಪೂಜಿಸಬೇಕು.
* ಈ ದಿನ ಸಾಧ್ಯವಾದಷ್ಟು ಶಿವನ ಮಂತ್ರಗಳು ಪಠಿಸಿ, ಶಿವನ ಮಂತ್ರಗಳಲ್ಲಿ ವಿಶೇಷವಾದ ಶಕ್ತಿಗಳು ಇವೆ ಮತ್ತು ಇವುಗಳ ಜೊತೆಗೆ ತಪ್ಪದೆ 108 ಬಾರಿ ನೀವು ಮನೆಯಲ್ಲಿಯೇ ಕುಳಿತು ಅಥವಾ ದೇವಸ್ಥಾನದಲ್ಲಿ ಕುಳಿತು ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು.

ಈ ದಿನ ಮಾಡಬಾರದ ಸಂಗತಿಗಳು:-

* ಈ ದಿನ ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆ ಧರಿಸಬಾರದು ಯಾಕೆಂದರೆ ಶಿವನಿಗೆ ಕಪ್ಪು ಬಟ್ಟೆಗಳು ಎಂದರೆ ಇಷ್ಟ ಇಲ್ಲ
* ಶಿವನಿಗೆ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಅರಿಶಿಣವನ್ನು ಹಚ್ಚಬಾರದು ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ
* ಶಿವನಿಗೆ ಕೆಂಪು ಬಣ್ಣದ ಪುಷ್ಪಗಳು ಇಷ್ಟ ಇಲ್ಲ, ಆದ ಕಾರಣ ಈ ದಿನ ಶಿವನಿಗೆ ಪೂಜೆ ಮಾಡುವಾಗ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಬೇಡಿ

* ತುಳಸಿ ವಿಷ್ಣುವಿಗೆ ಪ್ರಿಯ, ತಾಯಿ ಮಹಾಲಕ್ಷ್ಮಿ ಅನುರೂಪ. ಶಿವನೇ ಮೆಚ್ಚಿ ತಾಯಿ ಲಕ್ಷ್ಮಿಯ ಭಕ್ತಿಗೆ ಮೆಚ್ಚಿ ವರ ನೀಡಿರುವುದರಿಂದ ತುಳಸಿಯನ್ನು ಕೂಡ ಶಿವಪೂಜೆಗೆ ಅರ್ಪಿಸಬಾರದು
* ಪುರಾಣಗಳ ಪ್ರಕಾರ ಶಿವಲಿಂಗಕ್ಕೆ ಪೂರ್ತಿಯಾಗಿ ಪ್ರದಕ್ಷಿಣೆ ಮಾಡಬಾರದು.
* ಶಿವನನ್ನು ಬಿಲ್ವಪತ್ರೆಯ ಎಲೆಗಳಿಂದ ಪೂಜಿಸಬೇಕು. ಬಿಲ್ವಪತ್ರೆಯನ್ನು ಮರದಿಂದ ಬಿಡಿಸಿ 48 ದಿನಗಳಾಗಿದ್ದರೂ ಅರ್ಪಿಸಬಹುದು ಆದರೆ ಇದು ಹುಳುಕಾಗಿರಬಾರದು, ಇದಕ್ಕೆ ಹಾನಿಯಾಗಿರಬಾರದು.

ಈ ಸುದ್ದಿ ಓದಿ:- ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!

* ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಶಿವರಾತ್ರಿ ದಿನದಂದು ಮಾಂಸಹಾರ ಮತ್ತು ಮಧ್ಯಸೇವನೆಯನ್ನು ಮಾಡಲೇಬಾರದು.
* ಬಹಳ ತಡವಾಗಿ ಪೂಜೆ ಮಾಡಬಾರದು
* ಪ್ಲಾಸ್ಟಿಕ್ ಹಾಗೂ ಸ್ಟೀಲ್ ಪಾತ್ರೆಗಳನ್ನು ಶಿವಪೂಜೆಗೆ ಬಳಸಬಾರದು. ಹಿತ್ತಾಳೆ ಅಥವಾ ತಾಮ್ರದ ವಸ್ತುಗಳನ್ನು ಪೂಜೆಗೆ ಬಳಸಬೇಕು.

300 ವರ್ಷಗಳ ನಂತರ ಬಂದಿದೆ, ಪ್ರಬಲ ಶಿವರಾತ್ರಿ ತ್ರಿಕೋನ ಶಿವಯೋಗ, ಶುಭ ಮುಹೂರ್ತದಲ್ಲಿ ಈ ಕೆಲಸ ಮಾಡಿ ವರ್ಷಪೂರ್ತಿ ಹಣಕಾಸಿನ ಕೊರತೆ ಬರುವುದಿಲ್ಲ…

 

ಮಾರ್ಚ್ 08, 2024ರಂದು ಮಹಾ ಶಿವರಾತ್ರಿ ಇದೆ, ಪ್ರತಿ ವರ್ಷವೂ ಕೂಡ ಶಿವರಾತ್ರಿ ದಿನ ಬರುತ್ತಲೇ ಇರುತ್ತದೆ. ಈ ಬಾರಿಯ ಶಿವರಾತ್ರಿ ಮಾತ್ರ ಬಹಳ ವಿಶೇಷ. 300 ವರ್ಷಗಳ ನಂತರ ಈ ರೀತಿ ಮತ್ತೊಮ್ಮೆ ತ್ರಿಕೋನ ಶಿವಯೋಗ ಇರುವ ಶಿವರಾತ್ರಿ ಬಂದಿದೆ.

ಈ ದಿನವನ್ನು ಶಿವ ಪಾರ್ವತಿಯರು ವಿವಾಹದ ದಿನ ಶಿವನು ವಿಷಯವನ್ನು ಕುಡಿದು ನೀಲಕಂಠನಾದ ದಿನ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ. ಈ ದಿನವನ್ನು ಸಂಪೂರ್ಣವಾಗಿ ಶಿವನಿಗಾಗಿ ಭಕ್ತರು ಮೀಸಲಿಟ್ಟು ಕಳೆಯುತ್ತಾರೆ. ಎಲ್ಲ ಶಿವಾಲಯಗಳಲ್ಲೂ ಕೂಡ ಅಭಿಷೇಕ ಪ್ರಿಯ ಶಿವನಿಗೆ ವಿವಿಧ ಬಗೆಯ ದ್ರವ್ಯಗಳಿಂದ ಅಭಿಷೇಕ, ಶಿವನಿಗೆ ಪ್ರಿಯವಾದ ಹೂವುಗಳಿಂದ ಅಲಂಕಾರ ಪೂಜೆ ನಡೆಯುತ್ತದೆ.

ಭಕ್ತಾದಿಗಳು ದಿನಪೂರ್ತಿ ಉಪವಾಸ ಇದ್ದು ರಾತ್ರಿ ಸಮಯ ಜಾಗರಣೆ ಇದ್ದು ಶಿವಧ್ಯಾನದಲ್ಲಿ ದಿನ ಕಳೆಯುತ್ತಾರೆ ಈ ಶಕ್ತಿಶಾಲಿಯಾದ ಶಿವರಾತ್ರಿ ದಿನದಂದು ನೀವು ಕೂಡ ನಾವು ಹೇಳುವ ವಿಧಾನದಲ್ಲಿ ಶಿವನನ್ನು ಪೂಜಿಸಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ.

ಈ ಸುದ್ದಿ ಓದಿ:- ಶಂಖ, ಚಕ್ರ ಚಿಹ್ನೆ ಗುರುತಿಸುವುದು ಹೇಗೆ.? ಎಷ್ಟಿದ್ದರೆ ರಾಜಯೋಗ, ಯಾವುದಕ್ಕೆ ಏನು ಫಲ ನೋಡಿ.!

ಈ ದಿನದಂದು ಮುಂಜಾನೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ ಹಾಗೂ ತುಂಬೆ ಪತ್ರೆಗಳನ್ನು ಅರ್ಪಿಸಿ ಶಿವಲಿಂಗ ಪೂಜೆ ಮಾಡಿ, ಶಿವಪೂಜೆಯಲ್ಲಿ ಶಿವನಿಗೆ ಅಭಿಷೇಕ ಮಾಡುವುದು ವಿಶೇಷ ನಿಮ್ಮ ಮನೆಯಲ್ಲಿರುವ ಶಿವಲಿಂಗಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿ ನಂತರ ಧೂಪದೀಪದಿಂದ ಬೆಳಗಿ ನೈವೇದ್ಯ ಅರ್ಪಿಸಿ.

ತಪ್ಪದೇ 108 ಬಾರಿ ಪಂಚಾಕ್ಷರಿ ಮಂತ್ರವನ್ನು ಪಠಣೆ ಮಾಡಿ. ಈ ದಿನ ತ್ರಿಕಾಲ ಪೂಜೆ ಮಾಡಬಹುದು ಎಂದು ಹೇಳಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಪ್ರತಿದಿನ ಮುಂಜಾನೆ ಅಥವಾ ಅನುಕೂಲತೆ ಇದ್ದವರು ಮುಂಜಾನೆ ಮತ್ತು ಮುಸ್ಸಂಜೆ ಶಿವಪೂಜೆ ಮಾಡುತ್ತಾರೆ. ಶಿವರಾತ್ರಿ ದಿನದಂದು ಮೂರು ಸಮಯವು ಶಿವಪೂಜೆ ಮಾಡಬಹುದು ಮತ್ತು ದೇವಾಲಯಗಳಲ್ಲಿ ರಾತ್ರಿ ಪೂರ್ತಿ ಶಿವನಿಗೆ ವಿಶೇಷವಾದ ಪೂಜೆಗಳು ನಡೆಯುತ್ತಿರುತ್ತವೆ.

ಹಾಗಾಗಿ ಮನೆಯಲ್ಲಿ ಪೂಜೆ ಮಾಡಿದ ನಂತರ ಶಿವಾಲಯಗಳಿಗೆ ಹೋಗಿ ಸಮಯ ಕಳೆಯಿರಿ ನಿಮಗೆ ಶಕ್ತಿ ಇದ್ದರೆ ಉಪವಾಸ ಮಾಡಿ ಅಥವಾ ವೃದ್ಧರಾಗಿದ್ದರೆ, ಯಾವುದಾದರೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳಬೇಕಿದ್ದರೆ, ಮಕ್ಕಳಾಗಿದ್ದರೆ ಫಲಹಾರ ಸೇವಿಸಬಹುದು. ರಾತ್ರಿ ಜಾಗರಣೆ ಇದ್ದು ಮರುದಿನ ಬೆಳಿಗ್ಗೆ ಉಪವಾಸ ಬಿಡಿ.

ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

ಹೆಚ್ಚು ಸಮಯ ಶಿವನ ಬಳಿ ಕಳೆಯುವುದರಿಂದ ಈ ದಿನ ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಪರಿಹಾರ ಮಾಡುವಂತೆ ಶಿವನ ಬಳಿ ಪ್ರಾರ್ಥಿಸಿಕೊಳ್ಳಿ ಖಂಡಿತವಾಗಿಯೂ ಬಹಳ ಬೇಗ ವರಗಳನ್ನು ತನ್ನ ಭಕ್ತಾದಿಗಳಿಗೆ ನೀಡುವ ಈಶ್ವರನು ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡಿ ಕಾಪಾಡುತ್ತಾರೆ. ಮನೆಯಲ್ಲಿ ಯಾವ ರೀತಿಯ ಶಿವಲಿಂಗ ಪೂಜೆ ಮಾಡಬೇಕು ಎನ್ನುವ ಗೊಂದಲ ಇದ್ದರೆ ಅದಕ್ಕೆ ಮಾಹಿತಿ ಹೀಗಿದೆ ನೋಡಿ.

* ಪ್ರತಿದಿನವೂ ಕೂಡ ಮುಂಜಾನೆ ಶಿವಲಿಂಗ ಪೂಜೆ ಮಾಡುವುದಾದರೆ ನರ್ಮಧೇಶ್ವರ ಶಿವಲಿಂಗವನ್ನು ಮನೆಗೆ ತೆಗೆದುಕೊಂಡು ಬಂದು ಪ್ರತಿ ದಿನವೂ ಜಲಾಭಿಷೇಕ ಮಾಡಿ ಶಿವನಿಗೆ ಪೂಜೆ ಮಾಡಿ
* ಪ್ರತಿದಿನ ಪೂಜೆ ಮಾಡಲು ಸಾಧ್ಯವಿಲ್ಲ ಸೋಮವಾರ ಅಥವಾ ಹಬ್ಬ ಹರಿದಿನಗಳ ವಿಶೇಷ ಸಮಯದಲ್ಲಿ ಪೂಜೆ ಮಾಡುತ್ತೇವೆ ಎನ್ನುವುದಾದರೆ, ಸ್ಪಟಿಕಲಿಂಗವನ್ನು ತಂದು ಪೂಜೆ ಮಾಡಿ. ಸ್ಪಟಿಕ ಲಿಂಗವನ್ನು ಚೆನ್ನಾಗಿ ಬೆಳ್ಳಿ ಇಂತಹ ಲೋಹಗಳಲ್ಲಿ ಇಟ್ಟು ಕೂಡ ಪೂಜೆ ಮಾಡುತ್ತಾರೆ.

* ನಿಮಗೆ ಪಾದರಸದ ಶಿವಲಿಂಗ ಸಿಕ್ಕಿದರೆ ಅದನ್ನು ಪೂಜೆ ಮಾಡುವುದು ಕೂಡ ಒಳ್ಳೆಯದು. ಯಾಕೆಂದರೆ ಪಾದರಸವನ್ನು ಶಿವನಿಂದ ಸೃಷ್ಟಿಯಾದ ಧಾತು ಎಂದು ನಂಬಲಾಗಿದೆ.
* ಶಿವಲಿಂಗಕ್ಕೆ ನೀರು ಗಂಗಾಜಲ ಕಬ್ಬಿನರಸ ಜೇನುತುಪ್ಪ ಹಾಲು ಮೊಸರು ತುಪ್ಪ ಬೆಲ್ಲ ಪಂಚಾಮೃತ ಈ ಪದಾರ್ಥಗಳಿಂದ ಅಭಿಷೇಕ ಮಾಡುವುದನ್ನು ರುದ್ರಾಭಿಷೇಕ ಎನ್ನುತ್ತಾರೆ.

ಈ ಸುದ್ದಿ ಓದಿ:- ಮನುಷ್ಯ 40 ವರ್ಷದ ನಂತರ ಏಕೆ ಕಷ್ಟ ಪಡುತ್ತಾನೆ ಗೊತ್ತಾ.?, ಬೇರೆಯವರ ಆಯಸ್ಸನ್ನು ಪಡೆದಿರುವುದೇ ಇದಕ್ಕೆ ಕಾರಣವೇ ನೋಡಿ.!

ಪ್ರತಿದಿನ ಮಾಡಲಾಗದವರು ಶಿವರಾತ್ರಿ ಹಬ್ಬದ ದಿನದಂದು ತಪ್ಪದೆ ಮನೆಯಲ್ಲಿರುವ ಶಿವಲಿಂಗಕ್ಕೆ ಇವುಗಳಿಂದ ಅಭಿಷೇಕ ಮಾಡುತ್ತಾರೆ ಈ ಸಮಯದಲ್ಲಿ ಒಂದೊಂದು ದ್ರವ್ಯದಿಂದ ಅಭಿಷೇಕ ಮಾಡುವಾಗ ಒಂದೊಂದು ವಿಶೇಷವಾದ ಮಂತ್ರವನ್ನು ಹೇಳಬೇಕು ಸಾಧ್ಯವಾಗದಿದ್ದರೆ ಪಂಚಾಕ್ಷರಿ ಮಂತ್ರವನ್ನು ಅಥವಾ ಓಂ ನಮೋ ಪಾರ್ವತಿ ಪತೈ ನಮಃ ಎಂದು ಹೇಳಬಹುದು. ಇದರಲ್ಲಿ ಅರ್ಪಿಸುವ ಒಂದೊಂದು ವಸ್ತುವೂ ಒಂದೊಂದು ರೀತಿಯಲ್ಲಿ ನಿಮ್ಮ ಜೀವನದ ಕಷ್ಟಗಳನ್ನು ಕಳೆಯುತ್ತದೆ ಎನ್ನುವುದು ನಂಬಿಕೆ.

ಶಂಖ, ಚಕ್ರ ಚಿಹ್ನೆ ಗುರುತಿಸುವುದು ಹೇಗೆ.? ಎಷ್ಟಿದ್ದರೆ ರಾಜಯೋಗ, ಯಾವುದಕ್ಕೆ ಏನು ಫಲ ನೋಡಿ.!

 

ನಮ್ಮ ಅದೃಷ್ಟ ನಮ್ಮ ಕೈಗಳಲ್ಲಿಯೇ ಇದೆ. ಇದಕ್ಕೆ ಶ್ರಮದಿಂದ ಸಾಧಿಸಿ ಎನ್ನುವ ಒಳಾರ್ಥ ಇದ್ದರೂ ಹಸ್ತ ಸಾಮುದ್ರಿಕ ಶಾಸ್ತ್ರದ ಮೂಲಕ ನಮ್ಮ ಅದೃಷ್ಟದ ಸುಳಿವು ಹಾಗೂ ನಾವು ಯಾವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಲ್ಲೆವು ಎನ್ನುವ ಮಾರ್ಗದರ್ಶನ ಸಿಗುವುದು ಸುಳ್ಳಲ್ಲ. ನಮ್ಮ ಹಸ್ತಗಳಲ್ಲಿರುವ ರೇಖೆಗಳು ನಮ್ಮ ಕೈ ಬೆರಳ ತುದಿಯಲ್ಲಿರುವ ಚಿಹ್ನೆಗಳ ಮೂಲಕವೂ ಕೂಡ ನಮ್ಮ ಹಣೆಬರಹವನ್ನು ನಿರ್ಧರಿಸಲಾಗುತ್ತದೆ.

ಇಂದು ನಾವು ಈ ವಿಶೇಷವಾದ ವಿದ್ಯೆಯಲ್ಲಿ ಪ್ರತಿಯೊಬ್ಬ ಸಾಮಾನ್ಯನಿಗೂ ತಿಳಿದಿರಬೇಕಾದ ಒಂದು ಸಂಗತಿಯ ಬಗ್ಗೆ ತಿಳಿಸುತ್ತಿದ್ದೇವೆ. ನಮ್ಮ ಕೈ ಬೆರಳ ತುದಿಯಲ್ಲಿ ಇರುವ ಚಿಹ್ನೆಗಳು ಯಾವುವು ಇವುಗಳ ಸಂಖ್ಯೆ ಆಧಾರದ ಮೇಲೆ ಏನನ್ನು ಹೇಳಬಯಸುತ್ತವೆ, ಎನ್ನುವುದನ್ನು ತಿಳಿಸುತ್ತಿದ್ದೇವೆ.

ನಮ್ಮ ಕೈ ಬೆರಳಗಳ ತುದಿಗಳಲ್ಲಿ ಶಂಖದ ರೀತಿ ರಚನೆ ಮತ್ತು ಚಕ್ರದ ರೀತಿಯ ಚಿಹ್ನೆ ಇರುತ್ತದೆ ಮತ್ತೊಂದು ಬಗೆಯಲ್ಲಿ ಇರುವುದನ್ನು ಸೀಪಾ ಕರೆಯುತ್ತಾರೆ. ಇವುಗಳನ್ನು ಗುರುತಿಸುವುದು ಹೇಗೆ? ಎಷ್ಟಿದ್ದರೆ ಏನು ಫಲ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ ಇವುಗಳನ್ನು ಗುರುತಿಸಲು 10 ಬೆರಳುಗಳನ್ನು ಕೂಡ ಪರಿಗಣಿಸಬೇಕು.

ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

ಬೆರಳುಗಳ ತುದಿಯಲ್ಲಿ ಅಥವಾ ಪರ್ವದ ಕೊನೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿರುವ ರೇಖೆಗಳು ಯಾವ ರೀತಿ ಆಕಾರ ತಾಳುತ್ತಿದೆ ಎನ್ನುವುದನ್ನು ಕಂಡುಕೊಳ್ಳಬಹುದು. ಅದರ ಆಧಾರದ ಮೇಲೆ ಅದು ಶಂಖವೇ ಚಕ್ರವೇ ಅಥವಾ ಸೀಪವೇ ಎಂದು ಲೆಕ್ಕ ಹಾಕಿ 10 ಬೆರಳುಗಳಲ್ಲಿ ಯಾವುದು ಎಷ್ಟಿದೆ ಎಂದು ಒಂದು ಕಡೆ ಬರೆದುಕೊಳ್ಳಬೇಕು.

ಚಕ್ರ ಚಿಹ್ನೆಯ ಯೋಗ ಫಲಗಳು:-

* 10 ಬೆರಳುಗಳ ತುದಿಯಲ್ಲಿ ಕೂಡ ಚಕ್ರದ ಚಿಹ್ನೆಯನ್ನೇ ಹೊಂದಿದ್ದರೆ ಅವರು ಯೋಗಿ ಆಗುತ್ತಾರೆ
* 9 ಬೆರಳುಗಳಲ್ಲಿ ಚಕ್ರದ ಚಿಹ್ನೆಯನ್ನು ಹೊಂದಿದ್ದರೆ ಅವರು ರಾಜನಾಗುತ್ತಾರೆ ಅಥವಾ ದೊರೆ ಸಮಾನದ ಅಧಿಕಾರ ಹೊಂದಿರುವ ಅಥವಾ ಐಶ್ವರ್ಯ ಹೊಂದಿರುವಂತಹ ವ್ಯಕ್ತಿಯಾಗುತ್ತಾನೆ
* 8 ಚಕ್ರಗಳನ್ನು ಹೊಂದಿದ್ದರೆ ಅಂತ ವ್ಯಕ್ತಿಯು ರೋಗಗ್ರಸ್ಥನಾಗುತ್ತಾನೆ ಸದಾ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಾನೆ.

* 7 ಚಕ್ರಗಳನ್ನು ಹೊಂದಿದ್ದರೆ ಅಂತಹ ವ್ಯಕ್ತಿಗೆ ಒಂದು ಒಳ್ಳೆಯ ಶುಭಯೋಗವು ಅವರ ಅದೃಷ್ಟದಲ್ಲಿ ಇದೆ ಎಂದು ಹೇಳಲಾಗಿದೆ
* 6 ಮತ್ತು 5 ಚಕ್ರ ಇದ್ದರೆ ಎರಡಕ್ಕೂ ಕೂಡ ಒಂದೇ ರೀತಿಯ ಫಲವನ್ನು ಸೂಚಿಸಲಾಗಿದೆ. ಇಂತಹ ವ್ಯಕ್ತಿಗಳು ಬಹಳ ಕಾಮಸೂಕ್ತ ಇರುವ ವ್ಯಕ್ತಿಗಳಾಗಿರುತ್ತಾರೆ ಸ್ತ್ರೀ ವಿಲಾಸಿಗಳಾಗಿರುತ್ತಾರೆ ಎಂದು ಹೇಳಲಾಗಿದೆ
* 4 ಚಕ್ರಗಳು ಇದ್ದರೆ ಅಂತವರ ಜೀವನವು ಬಹಳ ಕಷ್ಟದಿಂದ ಕೂಡಿರುತ್ತದೆ ಸದಾ ಕಾಲ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಲಾಗಿದೆ.

ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

* 3 ಚಕ್ರಗಳು ಇದ್ದರೆ ಬಹಳ ಸಿರಿವಂತರಾಗಿರುತ್ತಾರೆ, ಇವರಿಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ
* 2 ಚಕ್ರಗಳು ಇದ್ದರೆ ಆ ವ್ಯಕ್ತಿಗಳು ಗೌರವಾನ್ವಿತ ವ್ಯಕ್ತಿಗಳಾಗಿರುತ್ತಾರೆ, ಕೀರ್ತಿವಂತರಾಗುತ್ತಾರೆ.
* 1 ಚಕ್ರ ಇದ್ದರೆ ಇವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಇದ್ದು, ಬಹಳ ಸಂತೋಷದಲ್ಲಿ ಜೀವನ ಕಳೆಯುತ್ತಾರೆ ಎಂದು ಹೇಳಲಾಗಿದೆ.

ಶಂಖ ಚಿಹ್ನೆಯ ಯೋಗ ಫಲಗಳು:-

* 1 ಶಂಖ ಚಿಹ್ನೆ ಇದ್ದರೆ ಸುಖ ಸಂಪನ್ನರಾಗಿರುತ್ತಾರೆ
* 2 ಶಂಖ ಚಿಹ್ನೆಯು ಬಡತನದ ಸೂಚಕ
* 3 ಶಂಖ ಚಿಹ್ನೆ ಇರುವವರಲ್ಲಿ ದುರ್ಗುಣದ ಅಂಶ ಹೆಚ್ಚಾಗಿರುತ್ತದೆ
* 4 ಶಂಖ ಚಿಹ್ನೆ ಇರುವವರು ಸದ್ಗುಣವಂತರಾಗಿರುತ್ತಾರೆ
* 5 ಶಂಖ ಇರುವವರು ನಿರ್ಧನವಂತರಾಗಿರುತ್ತಾರೆ
* 6 ಶಂಖ ಚಿಹ್ನೆ ಇರುವವರು ಧೈರ್ಯಶಾಲಿಗಳಾಗಿರುತ್ತಾರೆ, ಸ್ವ ಸಾಮರ್ಥ್ಯದಿಂದ ಜೀವನದಲ್ಲಿ ಏಳಿಗೆಯಾಗುತ್ತಾರೆ
* 7 – 10 ಶಂಖಗಳು ಇದ್ದರೆ ಒಂದೇ ರೀತಿಯ ಫಲ ಹೊಂದಿರುತ್ತಾರೆ, ಇವರು ಆತನು ದೊರೆಯಾಗುತ್ತಾನೆ, ಶ್ರೀಮಂತಿಕೆಗೆ ಸಮನಾದ ಸುಖ ಲಭಿಸುತ್ತದೆ.

ಸೀಪ ಚಿಹ್ನೆಯ ಫಲಗಳು:-

ಶಂಖವು ಅಲ್ಲದ ಚಕ್ರವೂ ಅಲ್ಲದ ಚಿಹ್ನೆಗಳನ್ನು ಸೀಪ ಚಿಹ್ನೆಗಳು ಎನ್ನುತ್ತಾರೆ
* 1 ಸೀಪ ಚಿಹ್ನೆ ಇದ್ದರೆ ಗುಣವಂತರು
* 2 ಸೀಪ ಚಿಹ್ನೆ ಇದ್ದರೆ ವಾಕ್ಚತುರರು
* 3 ಇದ್ದರೆ ತುಂಬಾ ಸಿರಿವಂತರಾಗುತ್ತಾರೆ
* 4 ಇದ್ದರೆ ಸದ್ಗುಣವಂತರಾಗುತ್ತಾರೆ
* 5 – 10 ಸೀಪ ಚಿಹ್ನೆ ಇದ್ದರೆ ಅವರು ಬಹಳ ಧನ ಸಂಪತ್ತನ್ನು ಹೊಂದಿ ಭೋಗ ಜೀವನ ನಡೆಸುವಂತಹ ಯೋಗ ಹೊಂದಿರುತ್ತಾರೆ ಎಂದು ಹೇಳಲಾಗಿದೆ.

ಶಿವರಾತ್ರಿ ದಿನ ಸ್ನಾನದ ನೀರಿಗೆ ಇದನ್ನು ಬೆರೆಸಿ ಸ್ನಾನ ಮಾಡಿದರೆ ಸಾಕು ಅಪಾರ ಶ್ರೀಮಂತರಾಗುತ್ತೀರಿ.!

 

ಶಿವರಾತ್ರಿ ದಿನ ಶಿವನ ಪೂಜೆಗೆ ಆರಾಧನೆಗೆ ವಿಶೇಷವಾದ ದಿನ. ಲಿಂಗರೂಪಿಯಾದ ಅಭಿಷೇಕ ಪ್ರಿಯ ಶಿವನಿಗೆ ವಿಧವಿಧವಾದ ಅಭಿಷೇಕ ಮಾಡಿ ಉಪವಾಸ ಜಾಗರಣೆ ಮಾಡಿ ಶಿವನ ಕೃಪಾಕಟಾಕ್ಷಕ್ಕಾಗಿ ಬೇಡುತ್ತಾರೆ ಸಂಪೂರ್ಣವಾಗಿ ಈ ದಿನವನ್ನು ಶಿವನ ಧ್ಯಾನದಲ್ಲಿ ಕಳೆಯುತ್ತಾರೆ.

ವರ್ಷಕ್ಕೊಮ್ಮೆ ಬರುವ ಈ ಮಹಾಶಿವರಾತ್ರಿ ದಿನವು ಈ ವರ್ಷ ಮಾರ್ಚ್ 08 ಶುಕ್ರವಾರದಂದು ಬಂದಿದೆ ನೀವು ಕೂಡ ಈ ದಿನ ಶಿವನನ್ನು ವಿಶೇಷವಾಗಿ ನಾವು ಹೇಳುವ ಈ ಮೂರು ವಿಧಾನದಲ್ಲಿ ಪೂಜಿಸುವ ಮೂಲಕ ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಯಾವ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎನ್ನುವ ವಿವರ ಹೀಗಿದೆ ನೋಡಿ.

* ಮೊದಲನೇದಾಗಿ ಈಗಿನ ಕಾಲದಲ್ಲಿ ಬಹುತೇಕ ಸಮಸ್ಯೆ ಎಂದರೆ ಮದುವೆಯಾಗಲು ಒಳ್ಳೆಯ ಸಂಬಂಧ ಕೂಡಿ ಬರುತ್ತಿಲ್ಲ ಮದುವೆ ವಿಳಂಬವಾಗುತ್ತಿದೆ ಎನ್ನುವುದು. ಎಷ್ಟೋ ಜನರಿಗೆ ನಿಶ್ಚಿತಾರ್ಥದ ಹಂತಕ್ಕೆ ಬಂದು ಮದುವೆ ನಿಂತು ಹೋಗುತ್ತದೆ ಅಥವಾ ಸಾಕಷ್ಟು ವರ್ಷಗಳಿಂದ ಹೆಣ್ಣನ್ನು ಅಥವಾ ಗಂಡನ್ನು ನೋಡುತ್ತಲೇ ಇರುತ್ತಾರೆ ಸೆಟ್ ಆಗಿರುವುದಿಲ್ಲ ಇದರಿಂದ ಬಹಳ ಬೇಸರವಾಗಿರುತ್ತದೆ.

ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

ಯಾಕೆಂದರೆ, ಜೀವನದಲ್ಲಿ ಸರಿಯಾದ ಸಮಯಕ್ಕೆ ಎಲ್ಲವೂ ನಡೆಯಬೇಕು. ನಿಮಗೂ ಈ ರೀತಿ ಸಮಸ್ಯೆಗಳು ಇದ್ದರೆ ಶಿವರಾತ್ರಿಯ ದಿನದಂದು ಒಂದು ಲೋಟ ಹಸುವಿನ ಹಾಲಿಗೆ ಒಂದು ಚಿಟಿಕೆ ಶುದ್ಧವಾದ ಕೇಸರಿ ದಳಗಳನ್ನು ಹಾಕಿ ಶಿವಲಿಂಗಕ್ಕೆ ಅಭಿಷೇಕ ಮಾಡಲು ಶಿವ ದೇವಾಲಯಗಳಿಗೆ ಅರ್ಪಿಸಿ ಮತ್ತು ಅಲ್ಲಿ ಶಿವನನ್ನು ನಿಮ್ಮ ಸಮಸ್ಯೆ ಪರಿಹರಿಸುವಂತೆ ಪ್ರಾರ್ಥಿಸಿ, 108 ಬಾರಿ ಪಂಚಾಕ್ಷರಿ ಮಂತ್ರ ಜಪಿಸಿ ಪ್ರಾರ್ಥಿಸಿ. ಬಹಳ ಆಶ್ಚರ್ಯಕರ ರೀತಿಯಲ್ಲಿ ಮುಂದಿನ ಒಂದು ವರ್ಷದೊಳಗೆ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.

ಹಾಗೆಯೇ ಸಂತಾನ ವಿಳಂಬ ಎನ್ನುವುದು ಅನೇಕ ಹೆಣ್ಣು ಮಕ್ಕಳ ಕ’ಣ್ಣೀ’ರಿಗೆ ಕಾರಣವಾಗಿದೆ. ಹೆಣ್ಣುಮಕ್ಕಳಲ್ಲದೆ ಆಕೆಯ ಕುಟುಂಬವೂ ಕೂಡ ಈ ಕಾರಣಕ್ಕಾಗಿ ದುಃ’ಖಿಸುತ್ತಿರುತ್ತದೆ. ಈ ರೀತಿ ನಿಮ್ಮ ಮನೆಯಲ್ಲಿ ಸಮಸ್ಯೆ ಇದ್ದರೆ ಸಂತಾನ ಫಲ ಬಯಸುವವರು ಗೋಧಿ ಹಿಟ್ಟಿನಲ್ಲಿ 11 ಶಿವಲಿಂಗಗಳನ್ನು ಮಾಡಿ ಅದನ್ನು ಒಂದು ತಟ್ಟೆಯಲ್ಲಿ ಇಟ್ಟು ಎರಡು ಕೈಗಳಲ್ಲಿ ಶುದ್ಧ ನೀರು ತೆಗೆದು ಕೊಂಡು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ.

ಬಳಿಕ ದೀಪ ಕುಂಕುಮ ಬಿಲ್ವಪತ್ರೆ ಅಕ್ಷತೆ ಇವುಗಳಿಂದ ಪೂಜೆ ಮಾಡಿ ನೈವೇದ್ಯ ಅರ್ಪಿಸಿ 108 ಬಾರಿ ಪಂಚಾಕ್ಷರಿ ಮಂತ್ರ ಹೇಳುತ್ತಾ ನಿಮ್ಮ ಸಮಸ್ಯೆ ಪರಿಹಾರಕ್ಕಾಗಿ ಪ್ರಾರ್ಥಿಸಿ ಖಂಡಿತವಾಗಿಯೂ ನಿಮ್ಮ ಒಡಲು ತುಂಬುತ್ತದೆ. ಈ ಎರಡು ಸಮಸ್ಯೆಗಳ ಜೊತೆಗೆ ಬಹುತೇಕರ ಜೀವನದಲ್ಲಿ ಇರುವ ಮತ್ತೊಂದು ಸಮಸ್ಯೆ ಏನೆಂದರೆ ಹಣಕಾಸಿನ ಸಮಸ್ಯೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದರೆ ಎಂತಹ ಕಷ್ಟವನ್ನು ಬೇಕಾದರೂ ಜಯಿಸುವ ಧೈರ್ಯ ಬರುತ್ತದೆ.

ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಾಲದ ಸುಳಿಯಲ್ಲಿ ಸಿಲುಕಿದರೆ ಅಥವಾ ಎಲ್ಲಾದರೂ ಹಣ ಹಾಕಿ ಕಳೆದುಕೊಂಡಿದ್ದರೆ ನಿಮ್ಮ ವ್ಯಾಪಾರ ವ್ಯವಹಾರ ನಷ್ಟವಾಗಿ ಹಾಕಿದ ಬಂಡವಾಳ ಕೈಗೆ ಬರುತ್ತಿಲ್ಲ ಎನ್ನುವುದಾದರೆ ನೀವು ನಿಮ್ಮ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲು ಶಿವರಾತ್ರಿ ದಿನ ಒಂದು ಚಿಕ್ಕ ಆಚರಣೆ ಮಾಡಬೇಕು.

ನೀವು ಸ್ನಾನ ಮಾಡುವ ನೀರಿಗೆ ಐದರಿಂದ ಆರು ಕೇಸರಿ ದಳ ಅಥವಾ ಕೇಸರಿ ಇಲ್ಲದೆ ಇದ್ದರೆ ಏಲಕ್ಕಿಯ ಬೀಜಗಳನ್ನು ಐದಾರು ಹಾಕಿ ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮಿ ಕಳೆ ಬರುತ್ತದೆ, ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ನೀವು ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ಕಾಣುತ್ತೀರಿ.

1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

 

ಈ ಭೂಮಿ ಮೇಲೆ ಎಲ್ಲರ ಬದುಕು ಒಂದೇ ರೀತಿ ಇರುವುದಿಲ್ಲ. ಹಾಗೆಯೇ ಎಲ್ಲರ ಮನೆಯ ಪರಿಸ್ಥಿತಿಯು ಒಂದೇ ರೀತಿ ಇರುವುದಿಲ್ಲ. ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ಕ’ಷ್ಟ. ಒಂದೊಂದು ಹೆಣ್ಣು ಮಗುವಿಗೆ ಒಂದೊಂದು ರೀತಿಯ ನೋ’ವು, ಸಂ’ಕ’ಟ ಇರುತ್ತದೆ. ಕೆಲವರು ಬಹಳ ಅದ್ದೂರಿಯಾಗಿ ಬದುಕುತ್ತಾರೆ.

ಮೈತುಂಬ ಚಿನ್ನ, ಕೈ ತುಂಬಾ ಹಣ, ಕಾರಿನಲ್ಲಿ ಓಡಾಡುತ್ತಾರೆ ಅವರಿಗೇನು? ಅಂದುಕೊಳ್ಳುತ್ತೇವೆ ಆದರೆ ಅವರ ಮನಸ್ಸಿನಲ್ಲಿ ಆಳವಾದ ದುಃ’ಖ ಇರುತ್ತದೆ. ಹಾಗೆ ಕೆಲವರಿಗೆ ಒಳ್ಳೆಯ ಕುಟುಂಬ ಇದ್ದರೆ ಕೈಯಲ್ಲಿ ಹಣ ಇರುವುದಿಲ್ಲ. ಕೆಲವರಿಗೆ ಕಷ್ಟ ಇದ್ದರೂ ಹೆಣ್ಣು ಮಕ್ಕಳು ಬುದ್ಧಿವಂತರಾಗಿ ದುಡಿಯಲು ಹೋಗುತ್ತೇವೆ ಎಂದರೆ ಗಂಡ ಕೆಲಸಕ್ಕೆ ಕಳುಹಿಸುವುದಿಲ್ಲ.

ಹಾಗೆ ಹೆಂಡತಿಗೆ ಖರ್ಚಿಗೂ ಕೂಡ ಹಣ ಕೊಡದೆ ವರ್ಷಕ್ಕೆ ಒಂದು ಬಟ್ಟೆಯನ್ನು ಕೊಡಿಸದೆ ನೋ’ವು ಕೊಡುತ್ತಾರೆ ನಿಮಗೆ ಮನೆಯಿಂದ ಹೊರ ಹೋಗಿ ದುಡಿಯಲು ಅನುಮತಿ ಇಲ್ಲ ಅಥವಾ ಆ ಅನುಕೂಲತೆ ಇಲ್ಲ ಆದರೆ ಬದುಕು ನಡೆಸುವುದಕ್ಕೆ ಸ್ವಲ್ಪವಾದರೂ ಹಣ ಬೇಕು ಎಂದು ಬಯಸುವುದಾದರೆ ಒಂದು ರೂಪಾಯಿ ಕೂಡ ಖರ್ಚು ಮಾಡದೆ ಅದೃಷ್ಟ ಇದ್ದರೆ ತಿಂಗಳಿಗೆ ಲಕ್ಷದವರೆಗೆ ದುಡಿಯಬಹುದಾದ ಇಲ್ಲವಾದಲ್ಲಿ ಕನಿಷ್ಠ ತಿಂಗಳ ಖರ್ಚಿಗಾದರೂ ಹೆಣ್ಣು ಮಕ್ಕಳು ದುಡಿದುಕೊಳ್ಳಬಹುದಾದ ಮನೆಯಲ್ಲೇ ಮಾಡಬಹುದಾದ ಒಂದು ಸುಲಭ ಕೆಲಸದ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ಈ ಕೆಲಸ ಬೇರೆ ಯಾವುದು ಅಲ್ಲ, ಯೂಟ್ಯೂಬ್ ಚಾನೆಲ್ ಓಪನ್ ಮಾಡುವುದು ಇಂದು ಲಕ್ಷಾಂತರ ಹೆಣ್ಣು ಮಕ್ಕಳು ಈ ಉದ್ಯಮದಲ್ಲಿ ತೊಡಗಿಕೊಂಡು ಕೈ ತುಂಬಾ ಸಂಪಾದಿಸುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಹೇಗೆ ವಿಡಿಯೋ ಅಪ್ಲೋಡ್ ಮಾಡುವುದು, ಅದನ್ನು ಹೇಗೆ ಎಡಿಟ್ ಮಾಡುವುದು, ಥಂಬ್ ನೇಲ್ ಹಾಕುವುದು ಹೇಗೆ? ಇದೆಲ್ಲ ಬಹಳ ಚಿಕ್ಕ ವಿಚಾರ.

ಆಂಡ್ರಾಯ್ಡ್ ಫೋನ್ ಯೂಸ್ ಮಾಡಲು ಬರುವ ಯಾರಾದರೂ ಈ ಕೆಲಸ ಮಾಡಬಹುದು ಹೇಗಿದ್ದರೂ ನಿಮ್ಮ ಬಳಿ ಮೊಬೈಲ್ ಇರುತ್ತದೆ ಇಂಟರ್ನೆಟ್ ಇರುತ್ತದೆ ಅದನ್ನು ನೀವು ಸರಿಯಾಗಿ ಬಳಸಿಕೊಂಡು ನಿಮ್ಮ ಟ್ಯಾಲೆಂಟ್ ಅಷ್ಟೇ ಹೊರ ಹಾಕಿದರೆ ಸಾಕು ಅದರಿಂದಲೇ ನಿಮಗೆ ಒಂದು ಒಳ್ಳೆ ಹವ್ಯಾಸದ ಜೊತೆ ಹಣ ಕೂಡ ಬರುತ್ತದೆ. ಯೂಟ್ಯೂಬ್ ನಲ್ಲಿ ನೀವು ಸರ್ಚ್ ಮಾಡಿದರೆ ಇದೆಲ್ಲದರ ಮಾಹಿತಿಯೂ ಸಿಗುತ್ತದೆ ಆದರೆ ನಿಮಗೆ ತಿಳಿಯದ ಕೆಲ ಸಲಹೆಗಳನ್ನು ಕೊಡಲು ಬಯಸುತಿದ್ದೇವೆ.

ನೀವು ಯುಟ್ಯೂಬ್ ಚಾನೆಲ್ ಓಪನ್ ಮಾಡಿ ವಿಡಿಯೋ ಅಪ್ಲೋಡ್ ಮಾಡುವುದಾದರೆ ನಿಮ್ಮ ಚಾನೆಲ್ ಗೆ ಯಾವ ಹೆಸರು ಇಡುತ್ತೀರಾ ಅದರ ಬಗ್ಗೆ ಎಚ್ಚರಿಕೆಯಿಂದ ಇರಿ ಮತ್ತು ಸರ್ಚ್ ಮಾಡಿ ನೋಡಿ ಯಾಕೆಂದರೆ ಈಗಾಗಲೇ ನೀವು ಇಟ್ಟಿರುವ ಹೆಸರಿನಲ್ಲಿ ಬೇರೆ ಚಾನೆಲ್ ಇದ್ದರೆ ಅವರಿಗೆ ವೀವ್ಸ್ ಹೋಗುತ್ತದೆ. ಹೊರತು ನಿಮ್ಮ ವಿಡಿಯೋಸ್ ಶೋ ಆಗುವುದಿಲ್ಲ ಮತ್ತು ಸ್ವಲ್ಪ ವಿಭಿನ್ನವಾದ ಹೆಸರನ್ನು ಸೆಲೆಕ್ಟ್ ಮಾಡಿ ನೀವು ಯಾವ ಫೋನಿಂದ ಚಾನೆಲ್ ಓಪನ್ ಮಾಡ್ತೀರಾ ಅದೇ ಫೋನ್ ನಿಂದ ಆ ಚಾನೆಲ್ ಲಿಂಕ್ ಅಥವಾ ನೀವು ಅಪ್ಲೋಡ್ ಮಾಡಿದ ವಿಡಿಯೋ ಲಿಂಕ್ ಗಳನ್ನು ಬೇರೆಯವರಿಗೆ ಕಳಿಸಬೇಡಿ.

ಈ ಸುದ್ದಿ ಓದಿ:-ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!

ಈ ರೀತಿ ಮಾಡಿದರೆ ಯೂಟ್ಯೂಬ್ ನಿಮಗೆ ಸಪೋರ್ಟ್ ಮಾಡುವುದಿಲ್ಲ ನೀವು ಯಾರಾದರೂ ಒಬ್ಬರಿಗೆ ಕಳಿಸಬಹುದು ಮತ್ತು ಆ ನಂಬರ್ ಇಂದ ಉಳಿದ ಎಲ್ಲರಿಗೂ ಶೇರ್ ಆಗಬೇಕು. ಅಥವಾ ನೀವು ಬಾಯಿ ಮಾತಿನಲ್ಲಿ ಹೇಳಿ ಸಬ್ಸ್ಕ್ರೈಬ್ ಮಾಡಿಸಿಕೊಳ್ಳಬೇಕು. 1000 ಸಬ್ ಸ್ಕ್ರೈಬರ್ ಆದರೆ ಮತ್ತು ನಿಮ್ಮ ವಿಡಿಯೋಗಳು 4000 ವೀಕ್ಷಣೆ ಆದರೆ ನಿಮಗೆ ಹಣ ಬರಲು ಶುರುವಾಗುತ್ತದೆ ಈ ರೀತಿ ಆಗಬೇಕು ಎಂದರೆ ಮೊದಲಿಗೆ ನೀವು 30 ನಿಮಿಷಗಳ ವಿಡಿಯೋ ಮಾಡಬೇಕು.

ವ್ಲೋಗ್ ಮಾಡಬಹುದು ಅಥವಾ ರಂಗೋಲಿ ಬಿಡಿಸುವುದು, ಅಡುಗೆ ಮಾಡುವುದು, ಮೇಕಪ್ ಈ ರೀತಿ ನಿಮ್ಮಲ್ಲಿ ಯಾವ ಟ್ಯಾಲೆಂಟ್ ಇದೆ ಅದನ್ನೇ ತೋರಿಸಬಹುದು. ಆದಷ್ಟು ನೋಡುವುದಕ್ಕೆ ಇಂಟರೆಸ್ಟಿಂಗ್ ಆಗಿರುವ ರೀತಿ ಮತ್ತು ಜನರಿಗೆ ತಿಳಿಯದ ವಿಷಯಗಳನ್ನು ತಿಳಿಸಿದರೆ ನಿಮ್ಮ ಚಾನೆಲ್ ಸಕ್ಸಸ್ ಆಗುತ್ತದೆ. ವಿಡಿಯೋ ಅಪ್ಲೋಡ್ ಮಾಡಿದ ದಿನವೇ ವೀವ್ಸ್ ಬರುವುದಿಲ್ಲ ಒಂದು ದಿನಕ್ಕೆ ಒಂದು ತಿಂಗಳಿಗೆ ಒಂದು ವರ್ಷಕ್ಕೆ ಅಥವಾ ನಿಮ್ಮ ಯಾವುದಾದರೂ ಒಂದು ವಿಡಿಯೋ ವೈರಲ್ ಆದ ನಂತರ ನಿಮ್ಮ ಸಬ್ಸ್ಕ್ರೈಬರ್ ಜಾಸ್ತಿ ಆಗಬಹುದು ತಾಳ್ಮೆಯಿಂದ ಆರಂಭಿಸಿ ಯಶಸ್ವಿಯಾಗಿ.

ಮನುಷ್ಯ 40 ವರ್ಷದ ನಂತರ ಏಕೆ ಕಷ್ಟ ಪಡುತ್ತಾನೆ ಗೊತ್ತಾ.?, ಬೇರೆಯವರ ಆಯಸ್ಸನ್ನು ಪಡೆದಿರುವುದೇ ಇದಕ್ಕೆ ಕಾರಣವೇ ನೋಡಿ.!

 

ನಮ್ಮ ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಬ್ರಹ್ಮದೇವನು ಈ ಸೃಷ್ಟಿಯ ಸೃಷ್ಟಿಕರ್ತ. ಸಕಲ ಜೀವರಾಶಿಯನ್ನು ಸೃಷ್ಟಿ ಮಾಡಿ ಆಯಸ್ಸು ನಿರ್ಧರಿಸುವುದು ಬ್ರಹ್ಮ ದೇವನೇ. ಆದರೆ ಈ ಭೂಮಂಡಲದಲ್ಲಿ ಪ್ರತಿಯೊಂದು ಜೀವಿಗೂ ಕೂಡ ಆಯಸ್ಸು ಬೇರೆಬೇರೆ ರೀತಿ ಇರುತ್ತದೆ. ಇಲ್ಲಿ ಒಂದು ದಿನದಲ್ಲಿ ಹುಟ್ಟಿ ಒಂದೇ ದಿನದಲ್ಲಿ ಸಾಯುವ ಕ್ರಿಮಿ-ಕೀಟ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಶತಮಾನದವರೆಗೆ ಆಯಸ್ಸು ಪಡೆದ ಜೀವಿಗಳನ್ನು ಕಾಣಬಹುದು.

ಅದರಲ್ಲಿ ಪ್ರಾಣಿಗಳ ವರ್ಗಕ್ಕೆ ಬರುವುದಾದರೆ ಪ್ರಾಣಿಗಳಲ್ಲೂ ಕೂಡ ಒಂದು ಪ್ರಾಣಿಗೆ ಒಂದೊಂದು ಸರಾಸರಿ ವಯಸ್ಸು ನಿರ್ಧಾರ ಆಗಿದೆ, ಈ ರೀತಿ ವ್ಯತ್ಯಾಸ ಆಗಿರುವುದಕ್ಕೂ ಹಾಗೂ ಅತಿ ಹೆಚ್ಚಿನ ಆಯಸ್ಸು ಪಡೆದಿರುವ ಮನುಷ್ಯನು ಜೀವನದಲ್ಲಿ ಬಹಳ ಕಷ್ಟ ಪಡುವುದಕ್ಕೆ ಸಂಬಂಧ ಇದೆಯೇ ಎನ್ನುವ ವಿಚಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಈ ಸುದ್ದಿ ಓದಿ:- ನಿಮ್ಮ ಹೆಂಡತಿಯಲ್ಲಿ ಈ ಗುಣಗಳು ಇದ್ದರೆ ಆಕೆ ಪರಿಪೂರ್ಣ ಪತ್ನಿ.!

ಇದಕ್ಕೆ ಒಂದು ಕಥೆಯೂ ಕೂಡ ಇದೆ. ಬ್ರಹ್ಮ ದೇವನು ಪ್ರಾಣಿಗಳಿಗೆ ಆಯಸ್ಸು ನಿರ್ಧಾರ ಮಾಡುವಾಗ ಮನುಷ್ಯ, ಕತ್ತೆ, ನಾಯಿ ಹಾಗೂ ಗೂಬೆ ಎಲ್ಲರಿಗೂ ಸಮ ವಯಸ್ಸು ಅಂದರೆ 40 ವರ್ಷಗಳು ನಿರ್ಧಾರ ಮಾಡಿದ್ದರಂತೆ. ಮೊದಲಿಗೆ ಬ್ರಹ್ಮದೇವನ ಬಳಿ ಬಂದು ತನ್ನ ಕೋರಿಕೆ ಇಟ್ಟ ಕತ್ತೆಯು ನನಗೆ 40 ವರ್ಷ ಬಹಳ ಅಧಿಕ ಆಯ್ತು ಅಷ್ಟು ಆಯಸ್ಸುವರೆಗೂ ಕೂಡ ನಾನು ನನ್ನ ಮಾಲೀಕನ ಮನೆಯಲ್ಲಿ ದುಡಿಯಲು ಸಾಧ್ಯವಿಲ್ಲ.

ಹಾಗಾಗಿ ನಾನು ಹೆಚ್ಚು ಚೈತನ್ಯದಿಂದ ಇರುವ 20 ವರ್ಷ ವಯಸ್ಸು ನನಗೆ ಸಾಕು ಆ ನಂತರದ 20 ವರ್ಷ ನನಗೆ ಬೇಡ, ದಯವಿಟ್ಟು ವಾಪಸ್ ತೆಗೆದುಕೊಳ್ಳಿ ಎಂದು ಮೊರೆ ಇಟ್ಟಿರಂತೆ. ಬ್ರಹ್ಮದೇವನು ಯೋಚನೆಯಲ್ಲಿರುವಾಗ ಮನುಷ್ಯನು ಬ್ರಹ್ಮದೇವರ ಬಳಿ ಆ 20 ವರ್ಷವನ್ನು ತನಗೆ ಕೊಡುವಂತೆ ಕೇಳಿಕೊಂಡರಂತೆ.

ಈ ಸುದ್ದಿ ಓದಿ:- ಉಗುರು ಕತ್ತರಿಸುವುದಕ್ಕೂ ಪದ್ಧತಿ ಇದೆ, ಈ ದಿನ ಉಗುರು ಕತ್ತರಿಸಿದರೆ ಬಡತನ ಬರುವುದಿಲ್ಲ.!

ನಾನು 40 ವರ್ಷಗಳವರೆಗೆ ಜೀವನದಲ್ಲಿ ಸರಿಯಾದ ರೀತಿಯಲ್ಲಿ ಸೆಟಲ್ ಆಗಿರುವುದಿಲ್ಲ, ಜೀವನವನ್ನು ಕೂಡ ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ನನಗೆ ಬದುಕು ಅರ್ಥವಾಗಿ ಸಂಸಾರದ ಜೊತೆ ಜವಾಬ್ದಾರಿಯಾಗಿ ಇರಬೇಕು ಎಂದು ಆಲೋಚನೆ ಬರುವಾಗ ನನ್ನ ಆಯಸ್ಸು ಮುಗಿದು ಹೋಗಿರುತ್ತದೆ.

ಇದರಿಂದ ಏನು ಪ್ರಯೋಜನ ಹೆಚ್ಚುವರಿಯಾಗಿ 20 ವರ್ಷ ಬೇಕು ಎಂದು ಕೇಳಿದರಂತೆ ಬ್ರಹ್ಮದೇವ ಅಸ್ತು ಎಂದು ಅನುಮತಿ ನೀಡಿದ ಕಾರಣ 40ರಿಂದ 60 ವರ್ಷದವರೆಗೆ ಮನುಷ್ಯ ತನ್ನ ಮಕ್ಕಳು ಮೊಮ್ಮಕ್ಕಳನ್ನು, ಕುಟುಂಬವನ್ನು ಸರಿಯಾಗಿ ಸೆಟಲ್ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡು ಕತ್ತೆ ರೀತಿ ದುಡಿಯುತ್ತಾನೆ.

ನಂತರ ನಾಯಿಯು ಕೂಡ ತನಗೆ ಹೆಚ್ಚುವರಿ 20 ವರ್ಷ ಬೇಡ 20 ವರ್ಷ ಆಯಸ್ಸು ಸಾಕು ಎಂದು ಕೋರಿಕೊಂಡಿತಂತೆ. ಮನುಷ್ಯ ಪುನಃ ಅದೇ ಆಯಸ್ಸನ್ನು ತನಗೆ ಕೊಡುವಂತೆ ಕೇಳಿಕೊಳ್ಳುತ್ತಾನೆ ಕಾರಣ ಕೇಳಿದಾಗ ನಾಯಿ ಸದಾಕಾಲ ತನ್ನ ಮನೆಯಲ್ಲಿಯೇ ಇರುತ್ತದೆ. ನಾನು 60 ವರ್ಷದವರೆಗೆ ನಾನಾ ಕಾರಣಗಳಿಂದಾಗಿ ಮನೆ ಬಿಟ್ಟು ಹೊರಗೆ ಓಡಾಡುತ್ತಲೇ ಇರುತ್ತೇನೆ.

ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ಹಾಗಾಗಿ 20 ವರ್ಷವಾದರೂ ನಾಯಿಯ ರೀತಿ ವಿಶ್ರಾಂತಿ ಮಾಡಬೇಕು ಎಂದು ಕೇಳಿಕೊಂಡಿದ್ದಕ್ಕೆ ಬ್ರಹ್ಮ ದೇವರು ಅಸ್ತು ಎಂದರಂತೆ. ಈ ಕಾರಣದಿಂದ 60 ರಿಂದ 80 ವರ್ಷದಲ್ಲಿ ಮನುಷ್ಯ ಮನೆಯಲ್ಲಿ ಇರುತ್ತಾನೆ ಹೊರಗೆ ಹೋಗುವುದಿಲ್ಲ ಮತ್ತು ಇದು ಮುಂದುವರೆದು ಗೂಬೆ ಸರದಿ ಬಂದಾಗ ಕೂಡ ಗೂಬೆಯು 20 ವರ್ಷ ಆಯಸ್ಸು ಸಾಕು ಎಂದು ಹೇಳಿದಾಗ ಹೆಚ್ಚುವರಿ 20 ವರ್ಷ ಆಯಸ್ಸನ್ನು ಮನುಷ್ಯನೇ ಕೋರಿಕೊಂಡನಂತೆ.

ಈ ಬಾರಿಯೂ ಅಸ್ತು ಎಂದ ಕಾರಣ 80 ರಿಂದ 100 ವರ್ಷ ವಯಸ್ಸಿನಲ್ಲಿ ಮನುಷ್ಯನ ಮುಖ ಚಹರೆ ಬದಲಾಗುತ್ತದೆ, ಕಣ್ಣುಗಳು ಒಳಗೆ ಹೋಗುತ್ತವೆ, ಚರ್ಮ ಬಿಳಿಚಿ ಕೊಳ್ಳುತ್ತದೆ, ಸುಕ್ಕಾಗುತ್ತದೆ ಬುದ್ಧಿ ಮಂಕಾಗುತ್ತದೆ. ಹೀಗೆ 80 ರಿಂದ 100 ವರ್ಷದವರೆಗೂ ಮನುಷ್ಯ ಗೂಬೆ ರೀತಿ ಬದುಕುತ್ತಾನೆ.

ನಿಮ್ಮ ಹೆಂಡತಿಯಲ್ಲಿ ಈ ಗುಣಗಳು ಇದ್ದರೆ ಆಕೆ ಪರಿಪೂರ್ಣ ಪತ್ನಿ.!

 

ಸಂಗಾತಿ ಎನ್ನುವುದು ಬದುಕಿನ ಬಹಳ ಮುಖ್ಯ ಭಾಗ. ಸಂಗಾತಿಗೆ ದೇಹದ ಅರ್ಧ ಭಾಗವನ್ನು ನೀಡಿ ಅರ್ಧನಾರೀಶ್ವರನಾದ ಮಹಾದೇವನನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಸಂಸಾರದಲ್ಲಿ ಸತಿ ಪತಿ ಇಬ್ಬರ ಪಾತ್ರವೂ ಕೂಡ ಬಹಳ ದೊಡ್ಡದು ಇಬ್ಬರಿಗೂ ಕೂಡ ಅಷ್ಟೇ ಪೂಜ್ಯನೀಯ ಸ್ಥಾನವಿದೆ ಹಾಗೂ ಜವಬ್ದಾರಿಗಳೂ ಇವೆ.

ಇಂದು ನಾವು ಈ ಲೇಖನದಲ್ಲಿ ದಾಂಪತ್ಯದಲ್ಲಿ ಪತ್ನಿ ಆದವರ ಪಾತ್ರ ಹೇಗಿರಬೇಕು ಮತ್ತು ಹೆಣ್ಣು ಮಕ್ಕಳಲ್ಲಿ ಯಾವ ರೀತಿ ಗುಣಗಳು ಇದ್ದರೆ ಅವರ ಪರಿಪೂರ್ಣ ಪತ್ನಿ ಆಗುತ್ತಾರೆ ಎನ್ನುವ ಅಂಶದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಹೆಣ್ಣು ಮಕ್ಕಳು ಮನೆಯ ಅದೃಷ್ಟ ಲಕ್ಷ್ಮಿ, ಮನೆಯಲ್ಲಿ ಎಲ್ಲರೂ ಮುದ್ದಾಗಿ ಸಾಗುತ್ತಾರೆ ಎಲ್ಲವೂ ನಿಜ.

ಮನೆಯಲ್ಲಿ ಇಷ್ಟೇ ಸವಲತ್ತು ಇದ್ದರು ಪ್ರೀತಿಯಿಂದ ಸಾಕಿದರೂ ಹೆಣ್ಣು ಮಕ್ಕಳು ಬೆಳೆಯುತ್ತಾ ಹೋದಂತೆ ಅಹಂಕಾರದ ಬದಲು ತಾಳ್ಮೆ ಸಹನೆ ಸೌಹಾರ್ದತೆ ಗುಣ ಕಲಿಯಬೇಕು. ಬೆಳೆಯುತ್ತಲೇ ಅಣ್ಣ-ತಮ್ಮಂದಿರ ಅಕ್ಕ-ತಂಗಿಯರ ಜೊತೆ ಹಂಚಿಕೊಳ್ಳುವ ಗುಣ ಕಲಿಯಬೇಕು. ತಂದೆ ತಾಯಿಗೆ ಪ್ರೀತಿಯ ಮಗಳಾಗಿ ಮಾತ್ರವಲ್ಲದೆ ಅವರಿಗೆ ಗೌರವ ಕೊಡುವ ಅವರ ಕೀರ್ತಿಯನ್ನು ಬೆಳಗುವ ಮಗಳಾಗಬೇಕು.

ಈ ಸುದ್ದಿ ಓದಿ:-ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ಹೆಣ್ಣು ಮಕ್ಳಳು ಓದಿ ವಿದ್ಯಾವಂತೆಯಾಗಿ ಸಾಧನೆ ಮಾಡಿದರೆ ಸಂತೋಷ ಒಂದು ವೇಳೆ ಮಾಡಲಾಗದಿದ್ದರು ಅಪ್ಪ ಅಮ್ಮನ ಹೆಸರಿಗೆ ಚ್ಯುತಿ ತರದೆ ಬದುಕಿದರೆ ಅದೇ ಆಕೆಯ ಜೀವನದ ಶ್ರೇಷ್ಠ ಸಾಧನೆ. ಮದುವೆ ಆದ ಮೇಲೆ ಕೂಡ ಪತಿ ಕುಟುಂಬದವರೊಂದಿಗೆ ಇದೇ ರೀತಿ ಹೊಂದಾಣಿಕೆ ಗುಣವಿರಬೇಕು.

ಅತ್ತೆ ಮನೆಯವರನ್ನು ತಂದೆ ತಾಯಿಯಂತೆ ಕಾಣುವ ಪತಿಯ ಅಣ್ಣತಮ್ಮಂದಿರನ್ನು ತನ್ನ ಅಣ್ಣತಮ್ಮಂದಿರಂತೆ ಗೌರವಿಸುವ ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಸೇವೆ ಮಾಡುವ ಮನೋಭಾವ ಹೊಂದಿದ್ದರೆ ಆಕೆಯನ್ನು ಪತ್ನಿಯಾಗಿ ಪಡೆದವರೇ ಪುಣ್ಯವಂತರು. ಹಾಗೆಯೇ ಮದುವೆ ಆದ ಮೇಲೆ ಬರುವ ಕಷ್ಟ ಸುಖಗಳಲ್ಲಿ ಒಂದೇ ರೀತಿ ಇರುವ ಸೋತಾಗ ಧೈರ್ಯ ಹೇಳುವ‌.

ಅನಾರೋಗ್ಯದಲ್ಲಿ ಧೈರ್ಯ ತುಂಬಿ ಶುಶ್ರೂಶೆ ಮಾಡುವ ಕಷ್ಟ ಬಂದಾಗ ಅದನ್ನು ಹಂಚಿಕೊಂಡು ಅವರ ಸಾಧನೆಗೆ ಸಹಕರಿಸುವ ಗುಣ ಹೊಂದಿದ್ದರೆ ಆಕೆ ಪರಿಪೂರ್ಣ ಪತ್ನಿ. ಹಾಗೆಯೇ ಯಾವುದೇ ಕಾರಣಕ್ಕೂ ಇನ್ನೊಬ್ಬರ ಆಸ್ತಿಗೆ ಆಗಲಿ ರೂಪಕ್ಕೆ ಆಗಲಿ ಮಾರುಹೋಗದೆ ಮದುವೆ ಆದ ಮೇಲೆ ಪತಿಯ ತನ ಎಲ್ಲವೂ ಎಂದು ಯಾವುದರ ಮೇಲು ಕೂಡ ಅತಿಯಾದ ವ್ಯಾಮೋಹಕ್ಕೆ ಬಲಿಯಾಗದೆ ಪರಿಶುದ್ದಳಾಗಿ ಬದುಕಿದರೆ ಆಕೆ ದೇವತೆ.

ಈ ಸುದ್ದಿ ಓದಿ:-ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!

ಪತಿ ದಾರಿ ತಪ್ಪಿದರೂ ಬುದ್ಧಿವಂತಿಕೆಯಿಂದ ಸರಿಪಡಿಸಿಕೊಳ್ಳುತ್ತಾ ಬದುಕುವ ಹೆಂಡತಿ ಶ್ರೇಷ್ಠ ಮಕ್ಕಳಾದ ಮೇಲೆ ಕೂಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತುಕೊಟ್ಟು ತಾನು ಕಲಿತ ಸಂಸ್ಕಾರವನ್ನು ತನ್ನ ಮಕ್ಕಳಿಗೂ ಕಲಿಸುವ ಗುಣ ಹೊಂದಿರುವ ಪ್ರತಿ ಹಂತದಲ್ಲೂ ಮಕ್ಕಳ ಮೇಲೆ ಕಣ್ಣಿಟ್ಟು ಕಾಯುವ ಹೆಣ್ಣು ತನ್ನ ಕಾಲ ಮುಗಿದ ಮೇಲು ತಾನು ಹೋದ ಮನೆಯಲ್ಲಿ ತನ್ನ ಹೆಸರು ಉಳಿಸಿಕೊಂಡಿರುತ್ತಾಳೆ.

ಹೆಣ್ಣು ಮಕ್ಕಳಲ್ಲಿ ಯಾವ ಸದ್ಗುಣ ಇದ್ದರೂ ಇರದಿದ್ದರೂ ವಾದ ಮಾಡುವ ಗುಣ ಇರಬಾರದು. ತನ್ನ ಕುಟುಂಬದವರಿಗೆ ತಪ್ಪು ಒಪ್ಪು ಏನಾಗಿದ್ದರೂ ಸೋಲುವ ಸಹನೆ ಇರಬೇಕು ಮತ್ತು ಅದನ್ನು ಸಮಾಧಾನದಿಂದ ಅರ್ಥೈಸುವ ತಾಳ್ಮೆ ಇರಬೇಕು, ಎಲ್ಲವನ್ನು ಗೆಲ್ಲುವ ಧೈರ್ಯ ಇರಬೇಕು.

ಆಗ ಆಕೆ ಆ ಮನೆಗೆ ಲಕ್ಷ್ಮಿ, ಸರಸ್ವತಿ ಮತ್ತು ದೇವಿ ಆಗಿರುತ್ತಾರೆ. ಆ ಮನೆಯ ಏಳಿಗೆಯೂ ಆಗುತ್ತದೆ. ಮನೆಯಲ್ಲಿರುವ ಎಲ್ಲರಿಗೂ ಕೂಡ ಎಲ್ಲಾ ಕಾರ್ಯಗಳಲ್ಲೂ ಗೆಲುವಾಗುತ್ತದೆ. ಇಂತಹ ಪತ್ನಿ ಸಿಗುವುದು ಏಳು ಜನ್ಮದ ಪುಣ್ಯ ಎಂದೇ ಹೇಳಬಹುದು.

ಉಗುರು ಕತ್ತರಿಸುವುದಕ್ಕೂ ಪದ್ಧತಿ ಇದೆ, ಈ ದಿನ ಉಗುರು ಕತ್ತರಿಸಿದರೆ ಬಡತನ ಬರುವುದಿಲ್ಲ.!

 

ಉಗುರು ಎನ್ನುವುದು ಬಹಳ ಸಾಮಾನ್ಯ ವಿಷಯ ಎಂದು ಜನರು ತಿಳಿದುಕೊಂಡಿದ್ದಾರೆ. ಆದರೆ ಅನೇಕ ಕಾಯಿಲೆಗಳಿಗೆ ಉದ್ದವಾಗಿ ಬೆಳೆಸಿರುವ ಉಗುರು ಕಾರಣವಾಗುತ್ತದೆ. ಶಾಸ್ತ್ರಗಳಲ್ಲೂ ಕೂಡ ಉಗುರಿಗೆ ಸಂಬಂಧಪಟ್ಟ ಹಾಗೆ ಕೆಲವು ಪದ್ಧತಿಗಳು ಇವೆ ಎನ್ನುವುದು ಎಲ್ಲರಿಗೂ ತಿಳಿದಿಲ್ಲ.

ಈಗಿನ ಕಾಲದಲ್ಲಿ ಉದ್ದವಾಗಿ ಉಗುರುಗಳನ್ನು ಬೆಳೆಸಿ ನೇಲ್ ಆರ್ಟ್ ಮಾಡಿಸುವುದೇ ಟ್ರೆಂಡ್ ಆಗಿದೆ. ಸೆಲೆಬ್ರೆಟಿಗಳು ಇದಕ್ಕಾಗಿಯೇ ಲಕ್ಷಗಟ್ಟಲೇ ಹಣ ಸುರಿಯುತ್ತಾರೆ, ಸ್ಪೆಷಲ್ ಫೋಟೋ ಶಕಟ್ ಕೂಡ ಮಾಡಿಸುತ್ತಾರೆ. ಇನ್ನು ಕಾಲೇಜು ಕೆಲಸಕ್ಕೆ ಹೋಗುವ ಹುಡುಗಿಯರಿಗೆ ಉದ್ದ ಉಗುರು ಬೆಳೆಸಿ ಬಣ್ಣ ಹಚ್ಚುವ ಅಭ್ಯಾಸ ಇದ್ದೇ ಇರುತ್ತದೆ.

ಆದರೆ ಈ ಉದ್ದ ಉಗುರಿನಲ್ಲಿ ಉಂಟಾಗುವ ಕೊಳೆಗಳಲ್ಲಿ ಸೃಷ್ಟಿಯಾಗುವ ಸೂಕ್ಷ್ಮಣು ಜೀವಿಗಳು ಆಹಾರ ತಿನ್ನುವ ಸಮಯದಲ್ಲಿ ನಮ್ಮ ದೇಹವನ್ನು ಸೇರುವುದರಿಂದ ಬಹಳ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಅರಿತಿದ್ದ ಹಿರಿಯರು ಉಗುರನ್ನು ವಿಷ ಎಂದಿದ್ದರು. ಈಗ ಈ ಉಗುರಿಗೆ ಸಂಬಂಧಪಟ್ಟ ಹಾಗೆ ಶಾಸ್ತ್ರದಲ್ಲಿರುವ ಕೆಲವು ವಿಷಯಗಳನ್ನು ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ದೇವರನ್ನು ನಂಬಿ ಪೂಜೆ ಮಾಡುವವರಿಗೆ ಹೆಚ್ಚು ಕಷ್ಟಗಳು ಮತ್ತು ಪೂಜೆ ಮಾಡದವರು ಸಂತೋಷವಾಗಿಯೇ ಇರುತ್ತಾರೆ ಯಾಕೆ ಗೊತ್ತಾ.?

ಆರೋಗ್ಯ ದೃಷ್ಟಿಕೋನದಿಂದ ಹಾಗೂ ಶಿಸ್ತಿನ ವಿಚಾರವಾಗಿ ಹೇಳುವುದಾದರೆ ಉಗುರುಗಳನ್ನು ಬೆಳೆಸಲೇಬಾರದು ಮತ್ತು ವಾರಕ್ಕೊಮ್ಮೆಯಾದರೂ ಉಗುರನ್ನು ಕತ್ತರಿಸಬೇಕು ಆದರೆ ಹೀಗೆ ಉಗುರು ಕತ್ತರಿಸುವುದಕ್ಕೂ ಒಂದು ಪದ್ಧತಿ ಇದೆ. ಕೆಲವು ತಪ್ಪಾದ ದಿನಗಳಲ್ಲಿ ಉಗುರನ್ನು ಕತ್ತರಿಸುವುದರಿಂದ ಜೀವನಕ್ಕೆ ಸಂಬಂಧಿಸಿದ ಹಾಗೆ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಅದನ್ನು ತಿಳಿಯದ ನಾವು ನಮಗೆ ಅನುಕೂಲವಾದ ದಿನಕ್ಕೆ ಅನುಕೂಲವಾದ ಸಮಯದಲ್ಲಿ ಅಥವಾ ರಜೆ ಇದ್ದಾಗ, ಇಂಟರ್ವ್ಯೂಗೆ ಹೋಗಬೇಕಿದ್ದಾಗ ಅಥವಾ ಮಕ್ಕಳು ಪಿಟಿ ಮಾಸ್ಟರ್ ಭಯಕ್ಕೆ ಎಲ್ಲೆಂದರಲ್ಲಿ ಉಗುರು ಕತ್ತರಿಸಿ ಬಿಡುತ್ತಾರೆ. ಬಳಿಕ ಇತರ ದುಷ್ಪರಿಣಾಮವನ್ನು ಅನುಭವಿಸಲೇಬೇಕಾಗುತ್ತದೆ ಇನ್ನು ಮುಂದೆ ಉಗುರು ಕತ್ತರಿಸುವ ವಿಷಯದಲ್ಲಿ ಈ ತಪ್ಪು ಮಾಡಬೇಡಿ ಯಾವ ದಿನ ಉಪಯೋಗ ಕತ್ತರಿಸುವುದರಿಂದ ಏನು ಫಲ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಆ ಪ್ರಕಾರವಾಗಿ ಪಾಲಿಸಿ.

* ಸೋಮವಾರದ ದಿನವು ಶಿವನ ದಿನವಾಗಿದೆ. ಈ ದಿನ ಮನಸ್ಸಿನ ಕಾರಕ ಚಂದ್ರನ ಪ್ರಭಾವವು ಹೆಚ್ಚಿಗೆ ಇರುವ ದಿನವೂ ಆಗಿದೆ. ಈ ದಿನದಂದು ಉಗುರುಗಳನ್ನು ಕತ್ತರಿಸುವುದು ಒಳ್ಳೆಯ ಫಲಗಳನ್ನು ನೀಡುತ್ತದೆ. ನಿಮ್ಮ ಜೀವನದಲ್ಲಿ ಬೇಡವಾದ, ನಿಮಗೆ ಇಷ್ಟವಿರದ ಸಂಗತಿಗಳಿಂದ ಮುಕ್ತಿ ಪಡೆಯುತ್ತೀರಿ.

ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

* ಮಂಗಳವಾರದಂದು ಉಗುರುಗಳನ್ನು ಕತ್ತರಿಸುವುದೇ ಆಗಲಿ ಕೂದಲನ್ನು ಕತ್ತರಿಸುವುದೇ ಆಗಲಿ ಶುಭವಲ್ಲ. ಹೀಗೆ ಮಾಡುವುದರಿಂರದ ನೀವು ಸಾಲದ ಸುಳಿಯಲ್ಲಿ ಸಿಲುಕುತ್ತೀರಿ ಎಂದು ಶಾಸ್ತ್ರಗಳಲ್ಲಿ ಹೇಳಿದೆ.

* ಬುಧವಾರದ ದಿನ ಉಗುರುಗಳನ್ನು ಕತ್ತರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಮತ್ತು ಇದು ಒಳ್ಳೆಯ ದಿನ ಎಂದು ಹೇಳಲಾಗಿದೆ. ಈ ದಿನ ಉಗುರು ಕತ್ತರಿಸಿದರೆ ಬುದ್ಧಿವಂತಿಕೆಗೆ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲಗಳನ್ನು ಪಡೆಯುತ್ತಾರೆ ಈ ರೀತಿಯ ಫಲಗಳು ಸಿಗುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ

* ಗುರುವಾರದ ದಿನವೂ ಕೂಡ ಉಗುರುಗಳನ್ನು ಕತ್ತರಿಸಬಹುದು. ಈ ದಿನ ಉಗುರು ಕತ್ತರಿಸಿದರೆ ಮಾನವೀಯ ಮೌಲ್ಯಗಳು ಹೆಚ್ಚಾಗುತ್ತವೆ, ನಿಮ್ಮಲ್ಲಿರುವ ಗುಣಗಳು ಪ್ರಕಟವಾಗುತ್ತದೆ ಎಂದು ಹೇಳಲಾಗಿದೆ
* ಶುಕ್ರವಾರದ ದಿನ ಲಕ್ಷ್ಮಿಯ ವಾರವಾಗಿರುವುದರಿಂದ ಈ ದಿನ ಉಗುರುಗಳನ್ನು ಹಾಗೂ ಕೂದಲನ್ನು ಕತ್ತರಿಸುವುದು ನಿಷಿದ್ಧ.

ಈ ಸುದ್ದಿ ಓದಿ:- ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!

* ಶನಿವಾರದ ದಿನ ಉಗುರುಗಳನ್ನು ಕತ್ತರಿಸಿದರೆ ಗ್ರಹಗತಿಗಳ ಮೇಲೆ ಕೆಟ್ಟ ಪ್ರಭಾವ ಉಂಟಾಗುತ್ತದೆ.
* ಭಾನುವಾರದ ದಿನ ಉಗುರುಗಳನ್ನು ಕತ್ತರಿಸಲು ಯಾವುದೇ ಅಡ್ಡಿ ಇಲ್ಲ
* ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಶುಭ ಕಾರ್ಯಗಳ ನಡೆಯುವ ದಿನಗಳಲ್ಲಿ ಯಾವುದೇ ವಾರವಾಗಿದ್ದರೂ ಉಗುರುಗಳನ್ನು ಕತ್ತರಿಸುವಂತಿಲ್ಲ

* ಮುಸ್ಸಂಜೆ ವೇಳೆ ಯಾವುದೇ ದಿನ ಉಗುರು ಕತ್ತರಿಸುವಂತಿಲ್ಲ.

ದೇವರನ್ನು ನಂಬಿ ಪೂಜೆ ಮಾಡುವವರಿಗೆ ಹೆಚ್ಚು ಕಷ್ಟಗಳು ಮತ್ತು ಪೂಜೆ ಮಾಡದವರು ಸಂತೋಷವಾಗಿಯೇ ಇರುತ್ತಾರೆ ಯಾಕೆ ಗೊತ್ತಾ.?

ಒಳ್ಳೆಯವರಿಗೆ ದೇವರ ಮೇಲೆ ಭಯ ಭಕ್ತಿ ಇಟ್ಟುಕೊಂಡು ಶ್ರದ್ಧಾಭಕ್ತಿಯಿಂದ ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಕ’ಷ್ಟಗಳು ಹೆಚ್ಚು. ಜನಸಾಮಾನ್ಯರಿಗೆ ಮೋ’ಸ ಮಾಡಿ, ಹಣ ದೋಚಿದವರು ಬೇರೆಯವರ ವಸ್ತುಗಳಿಗೆ ಆಸೆ ಪಡುವವರು, ಅ’ನ್ಯಾ’ಯ ಮಾಡುವವರು ಶ್ರೀಮಂತರವಾಗಿ ಬಹಳ ಚೆನ್ನಾಗಿ ಜೀವನ ನಡೆಸುತ್ತಿರುತ್ತಾರೆ.

ಹಾಗಾದರೆ ಭಗವಂತನನ್ನು ನೆನೆದು ಏನು ಪ್ರಯೋಜನ ಎಂದು ಹಲವರ ಪ್ರಶ್ನೆ. ಇದೇ ರೀತಿಯ ಪ್ರಶ್ನೆಯೊಂದನ್ನು ಅರ್ಜುನ ಶ್ರೀ ಕೃಷ್ಣರಿಗೂ ಕೇಳಿದ್ದ ಆಗ ಶ್ರೀ ಕೃಷ್ಣರು ಅರ್ಜುನರನ್ನು ಕರೆದುಕೊಂಡು ಒಂದು ಗ್ರಾಮಕ್ಕೆ ಹೋಗುತ್ತಾರೆ.

ಆ ಗ್ರಾಮದಲ್ಲಿ ಒಬ್ಬ ಬಡ ರೈತ ವಾಸಿಸುತ್ತಿರುತ್ತಾನೆ, ಆತ ಹಾಗೂ ಆತನ ಪತ್ನಿ ಸದ್ಗುಣ ಸಂಪನ್ನರು ಬಡತನ ಇದ್ದರೂ ಅತಿಥಿ ದೇವೋಭವ ಎಂದು ನಂಬಿ ಅಸಹಾಯಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ತಮ್ಮ ಕೃಷಿ ಕೆಲಸ ಹಾಗೂ 4 ಜಾನುವಾರುಗಳನ್ನು ನಂಬಿ ಮಕ್ಕಳ ಜೊತೆ ಇರುವುದರಲ್ಲಿ ತೃಪ್ತಿ ಪಟ್ಟುಕೊಂಡು ಬದುಕುತ್ತಿರುತ್ತಾರೆ.

ಈ ಸುದ್ದಿ ಓದಿ:- ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ಅದೇ ಗ್ರಾಮದಲ್ಲಿ ಒಬ್ಬ ಬಹಳ ಶ್ರೀಮಂತ ವ್ಯಕ್ತಿ ಇರುತ್ತಾನೆ, ಆತನಿಗೆ ಬಹಳ ದುರಂಕಾರ ಆತ ತನ್ನ ಎದುರು ಯಾರಾದರೂ ಬೆಳೆಯಲು ಪ್ರಯತ್ನಿಸಿದರೆ ಸಹಿಸದೆ ಅವರಿಗೆ ಕೆಟ್ಟದ್ದು ಮಾಡಿ ಅವರನ್ನು ದೋಚುತ್ತಿರುತ್ತಾನೆ. ತನ್ನ ಬಳಿ ರಾಶಿ ಸಂಪತ್ತು ಇದ್ದರೂ ಒಬ್ಬರಿಗೆ ಒಂದು ಕಾಸು ಕೂಡ ದಾನ ಮಾಡುವುದಿಲ್ಲ ಹೆಂಡತಿ ಮಕ್ಕಳಿಗೂ ಕೂಡ ಗೌರವ ಕೊಡದೆ ಹಿಂಸಿಸುತ್ತಿರುತ್ತಾನೆ.

ಮೊದಲಿಗೆ ಶ್ರೀ ಕೃಷ್ಣನು ಅರ್ಜುನನ ಜೊತೆ ವೇಷ ಬದಲಿಸಿಕೊಂಡು ಬಡ ರೈತನ ಮನೆಗೆ ಹೋಗಿ ತಾವು ದಾರಿ ತಪ್ಪಿ ಬಂದಿರುವುದಕ್ಕೆ ಎರಡು ದಿನ ಇಲ್ಲೇ ಉಳಿದುಕೊಳ್ಳಲು ಸ್ಥಳ ನೀಡಬೇಕಾಗಿ ಕೇಳಿಕೊಳ್ಳುತ್ತಾರೆ. ಆ ಎರಡು ದಿನಗಳು ರೈತ ಹಾಗೂ ರೈತನ ಕುಟುಂಬದವರು ಕೃಷ್ಣ ಮತ್ತು ಅರ್ಜುನರನ್ನು ಒಂದು ಚೂರು ನೋ’ವಾಗದಂತೆ ಇರುವ ಸೌಕರ್ಯಗಳಲ್ಲಿ ಸಂತೋಷದಿಂದ ಸತ್ಕರಿಸುತ್ತಾರೆ.

ಎರಡನೇ ದಿನ ಮುಗಿದ ಮೇಲೆ ರೈತನಿಗೆ ಹೇಳಿ ಕೃಷ್ಣ ಅರ್ಜುನ ಅಲ್ಲಿಂದ ಹೊರಡುವಾಗ ಕೃಷ್ಣನು ರೈತ ಹೊಂದಿದ್ದ 4 ಹಸುಗಳಲ್ಲಿ ಒಂದು ಬಹಳ ವಯಸ್ಸಾದ ಹಸು ಸಾ’ವ’ನ್ನಪ್ಪುವಂತೆ ಮಾಡುತ್ತಾರೆ. ಅರ್ಜುನನಿಗೆ ಏನು ಅರ್ಥವಾಗದೆ ದಿಗ್ಭ್ರಮೆಗೊಳಗಾಗುತ್ತಾರೆ, ಕಾರಣ ಕೇಳುತ್ತಾರೆ ಆಗ ಶ್ರೀಮಂತ ಧುರೀಣ ವ್ಯಕ್ತಿ ಮನೆಗೆ ಕರೆದುಕೊಂಡು ಹೋಗುತ್ತಾರೆ.

ಈ ಸುದ್ದಿ ಓದಿ:- ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!

ಅಲ್ಲಿ ಮತ್ತೆ ತಾವು ದಾರಿ ತಪ್ಪು ಬಂದಿರುವುದಾಗಿ ಎರಡು ದಿನ ಅರಮನೆಯಲ್ಲಿದ್ದು ಮೂರನೇ ದಿನ ಹೊರಟು ಬಿಡುವುದಾಗಿ ಈ ಊರಿನಲ್ಲಿ ಬಹಳ ಸಿರಿವಂತ ವ್ಯಕ್ತಿ ನೀವೇ ಹಾಗಾಗಿ ಇಲ್ಲಿಗೆ ಬಂದೆ ಎಂದು ಹೊಗಳಿ ಜಾಗ ಗಿಟ್ಟಿಸಿಕೊಳ್ಳಲು ನೋಡುತ್ತಾರೆ.

ಅವರಿಗೆ ಸಹಾಯ ಮಾಡುವ ಮನಸ್ಸಿಲ್ಲದೆ ಇದ್ದರು ಹೊಗಳಿಕೆಗೆ ಸೋತ ದುಷ್ಟ ವ್ಯಕ್ತಿ ಎರಡು ದಿನ ಮನೆ, ಕೊಟ್ಟಿಗೆ, ಜಮೀನಿನ ಕೆಲಸ ಮಾಡಿದರೆ ಆಶ್ರಯ ನೀಡುವುದಾಗಿ ಮನೆಯಲ್ಲಿ ಎಲ್ಲರೂ ತಿಂದು ಉಳಿದರೆ ಮಾತ್ರ ಆಹಾರ ಕೊಡುವುದಾಗಿ ಕಂಡಿಷನ್ ಹಾಕುತ್ತಾರೆ. ಆಯ್ತು ಎಂದು ಒಪ್ಪಿಕೊಂಡು ಸೇವಕರಂತೆ ಕೆಲಸ ಮಾಡಿದ ಕೃಷ್ಣ ಅರ್ಜುನರು ಎರಡನೇ ದಿನ ಹೊರಡಬೇಕಾದಾಗ ಸಂದರ್ಭದಲ್ಲಿ ದುಷ್ಟ ವ್ಯಕ್ತಿಯ ಮನೆ ಕೊಟ್ಟಿಗೆ ಕುಸಿದು ಬೀಳುವುದನ್ನು ಕಾಣುತ್ತಾರೆ.

ತಕ್ಷಣ ಕೃಷ್ಣ ಬಹಳ ಸುಂದರವಾದ ಒಂದು ಗಟ್ಟಿಮುಟ್ಟಾದ ಕೊಟ್ಟಿಗೆಯನ್ನಾಗಿ ಸರಿಪಡಿಸಿ ಕೊಡುತ್ತಾರೆ. ಸಹಿಸಲಾಗದ ಅರ್ಜುನ ಕೇಳಿಯೇ ಬಿಡುತ್ತಾರೆ. ರೈತ ದೇವರನ್ನೇ ನಂಬಿದ್ದಾನೆ ಮತ್ತು ಒಳ್ಳೆಯ ರೀತಿ ಬದುಕುತ್ತಿದ್ದೇನೆ ಅವನಿಗೆ ನೋವು ಕೊಟ್ಟು ಈ ಕೆಟ್ಟ ವ್ಯಕ್ತಿಗೆ ಶಿಕ್ಷೆ ಕೊಡುವ ಬದಲು ಉಪಕಾರ ಮಾಡುತ್ತಿದ್ದೀರಲ್ಲ ಇಂದು.

ಈ ಸುದ್ದಿ ಓದಿ:- ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

ಆಗ ಕೃಷ್ಣ ಹೇಳುತ್ತಾರೆ ಎಲ್ಲರ ಅದೃಷ್ಟವು ಪೂರ್ವಜನ್ಮದ ಕರ್ಮಾನುಸಾರ ನಿರ್ಧಾರ ಆಗಿರುತ್ತದೆ, ಆದರೆ ಭಗವಂತನ ಸ್ಮರಣೆಗಿಂತ ಕರ್ಮಗಳನ್ನು ಕಡಿಮೆ ಮಾಡಿಕೊಂಡು ಪುಣ್ಯ ಹೆಚ್ಚಿಸಿಕೊಳ್ಳಬಹುದು. ಹೇಗೆಂದರೆ ಆ ರೈತನ ಹಣೆ ಬರಹದಲ್ಲಿ ಇಂದು ಬಹಳ ವರ್ಷದಿಂದ ಆತನ ಜೊತೆಗಿದ್ದ ಬೆಲೆ ಬಾಳುವುದನ್ನು ಕಳೆದುಕೊಳ್ಳಬೇಕು ಎಂದು ಬರೆದಿತ್ತು.

ಆತನಿಗೆ ಇದ್ದ ಹಸುಗಳಲ್ಲಿ ಮತ್ತು ಆತ್ಮೀಯರಲ್ಲಿ ಈ ಹಸು ಸತ್ತಿದ್ದರೆ ಹೇಗೋ ಸಹಿಸಿಕೊಳ್ಳುತ್ತಿದ್ದ ಹಾಗಾಗಿ ಆಗುವ ನಷ್ಟದಲ್ಲಿ ಕಡಿಮೆ ನಷ್ಟ ಆಗುವಂತೆ ಮಾಡಿದೆ. ರಾಕ್ಷಸ ವ್ಯಕ್ತಿಯ ಅದೃಷ್ಟದಲ್ಲಿ ಇಂದು ಆತನಿಗೆ ಅನಿರೀಕ್ಷಿತ ಲಾಭವಾಗುತ್ತದೆ ಎಂದು ಇತ್ತು, ಈ ಕೊಟ್ಟಿಗೆ ಕೆಳಗೆ ಅಪಾರ ನಿಧಿ ಸಂಪತ್ತು ಇದೆ, ಇದು ಕುಸಿದು ಬಿದ್ದಿದ್ದರೆ ಆತ ಇದನ್ನು ಸರಿ ಮಾಡಿಸಿಕೊಳ್ಳಲು ಹೋದಾಗ ಇದರ ಕೆಳಗೆ ಇರುವ ಸಂಪತ್ತನ್ನೆಲ್ಲ ಹೊಡೆದುಕೊಳ್ಳುತ್ತಿದ್ದ.

ಹಾಗಾಗಿ ಕೊಟ್ಟಿಗೆ ಬೀಳದಂತೆ ಅಲ್ಪ ಲಾಭ ಮಾಡಿಕೊಟ್ಟಿದ್ದೇನೆ ಹೀಗೆ ಭಗವಂತನನ್ನು ಪ್ರಾರ್ಥಿಸಿ, ಸರಿಯಾದ ದಾರಿಯಲ್ಲಿ ನಡೆದರೆ ಅವರನ್ನು ದೇವರು ಕೈಬಿಡುವುದಿಲ್ಲ ಹಾಗೂ ನಷ್ಟವನ್ನು ಕಡಿಮೆ ಮಾಡುತ್ತಾನೆ ಮತ್ತು ದುರಹಂಕಾರದಿಂದ ನಡೆದರೆ ದೇವರಿಗೆ ಶ್ರದ್ಧೆ ತೊರದೆ ಇದ್ದರೆ ಅವರಿಗೆ ಸಿಗುವ ಪ್ರತಿಫಲ ಇಷ್ಟೇ ಎಂದು ಹೇಳುತ್ತಾರೆ, ಈಗ ಎಲ್ಲರಿಗೂ ಅರ್ಥವಾಗಿದೆ ಎಂದುಕೊಳ್ಳುತ್ತೇನೆ.